ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಜೆಪಿ ನಡ್ಡಾ ಭೇಟಿ: ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ

ವಿಜಯಪುರ: ವಿಜಯಪುರ ನಗರದ ಜ್ಞಾನಯೋಗಾಶ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆಪಿ ನಡ್ಡಾ, ಬಿ.ಎಸ್ ಯಡಿಯೂರಪ್ಪ,ಸಚಿವ ಅಶ್ವತ್ಥ ನಾರಾಯಣ ಭೇಟಿ ನೀಡಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಯವರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಆಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿರಚಿತ ಇಂಗ್ಲೀಷ ಭಾಷೆಯ ಪುಸ್ತಕ ನೀಡಿದರು. ನಂತರ ಮಾತನಾಡಿದ ಜೆ ಪಿ ನಡ್ಡಾ ನಾನು ಮಾನವೀಯತೆಯಿಂದ ಕೆಲಸ ಮಾಡುವ ಜೊತೆಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬಂತೆ ನಡೆಯೋದಾಗಿ ಹೇಳಿದ್ದಾರೆ.
ಆಶ್ರಮದ ಪ್ರಣವ ಮಂಟಪದ ದರ್ಶನ ಮಾಡಿದ್ದಲ್ಲದೇ ಸಿದ್ದೇಶ್ವರ ಶ್ರೀಗಳು ವಾಸವಿದ್ದ ಕೋಣೆಗೆ ಭೇಟಿ ನೀಡಿದರು.ಕಲಬುರಗಿದಿಂದ ವಿಶೇಷ ವಿಮಾನದ ಮೂಲಕ ವಿಜಯಪುರದ ಸೈನಿಕ ಶಾಲೆಗೆ ಆಗಮಿಸಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯ ಸಂಸ್ಕಾರ ನೆರವೇರಿಸಿದ ಸ್ಥಳವಾಗಿರುವ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.