ಕೇವಲ ಘೋಷಣೆಗೆ ಮಾತ್ರ ಸೀಮಿತವಾಯ್ತಾ ಭರವಸೆ? ಮಾತು ತಪ್ಪಿದ ರಾಜ್ಯ ಸರ್ಕಾರ!

ಸಿಎಂ ಹೇಳಿದ್ದಂತೆ ಇಂದಿನಿಂದ ಉಚಿತ ಬಸ್ ಪಾಸ್ ವಿತರಣೆ ಆಗಬೇಕಿತ್ತು. ಇಂದಿನಿಂದ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕಿತ್ತು. ಕೊಟ್ಟ ಮಾತಿನಂತೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿಲ್ಲ. ಉಚಿತ ಬಸ್ ಪಾಸ್ ವಿತರಣೆಗೆ ಬಜೆಟ್ ನಲ್ಲಿ 1 ಸಾವಿರ ಕೋಟಿ ಮೀಸಲಿಡಲಾಗಿತ್ತು.
ಸಾರಿಗೆ ಸಂಸ್ಥೆಗೆ ಸಿಗದ ಯಾವುದೇ ಆದೇಶ?
ಆದರೆ ಕೆಎಸ್‌ಆರ್ ಟಿಸಿ ಹಾಗೂ ಬಿಎಂಟಿಸಿಗೆ ಉಚಿತ ಪಾಸ್ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಈ ಹಿನ್ನೆಲೆ ಸಾರಿಗೆ ಸಂಸ್ಥೆ ಯಾವುದೇ ಬಸ್ ಪಾಸ್ ವಿತರಣೆ ಮಾಡಿಲ್ಲ.
ಹಾಸನದಿಂದ ಎಚ್.ಕೆ .ಮಹೇಶ್ ಕಣಕ್ಕೆ?
ಹಾಸನ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವರೂಪ್ ಗೆ ಚೆಕ್ಮೇಟ್ ಕೊಡಲು ರೇವಣ್ಣ ಪ್ಲ್ಯಾನ್ ಮಾಡಿದ್ದಾರಂತೆ. ಎಚ್.ಕೆ.ಮಹೇಶ್ ಅಚ್ಚರಿಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಈಗಾಗ್ಲೇ ದೇವೆಗೌಡರನ್ನು ಭೇಟಿ ಮಾಡಿ ಎಚ್ಕೆ ಮಹೇಶ್ ಚರ್ಚೆ ನಡೆಸಿದ್ದಾರಂತೆ. ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಕೆ.ಮಹೇಶ್ ಪ್ರೀತಂ ಗೌಡ ವಿರುದ್ಧ ಸೋತಿದ್ದರು.