ಲುಲು ಮಾಲ್‌ನಲ್ಲಿ ರಿಯಾಯಿತಿ

ಬೆಂಗಳೂರು: ರಾಜಾಜಿನಗರದ ಲುಲು ಗ್ಲೋಬಲ್ ಮಾಲ್‌ನಲ್ಲಿ ಹಾಗೂ ಫಾಲ್ಕನ್ ಸಿಟಿಯಲ್ಲಿನ ಲುಲು ಡೈಲಿಯಲ್ಲಿ ಜನವರಿ 31ರವರೆಗೆ 'ಎಂಡ್ ಆಫ್ ಸೀಸನ್ ಸೇಲ್' ನಡೆಯುತ್ತಿದೆ. ಜನವರಿ 5ರಿಂದ ಜನವರಿ 8ರ ಮಧ್ಯರಾತ್ರಿಯವರೆಗೆ ಲುಲು ಫ್ಯಾಷನ್ ಸ್ಟೋರ್, ಲುಲು ಕನೆಕ್ಟ್ಸ್, ಲುಲು ಹೈಪರ್‌ಮಾರ್ಕೆಟ್ ಮತ್ತು ಲುಲು ಡೈಲಿಯಲ್ಲಿ ಬಹುತೇಕ ಬ್ರ್ಯಾಂಡ್‌ಗಳಿಗೆ ಶೇಕಡ 50ರಷ್ಟು ರಿಯಾಯಿತಿ ಇರಲಿದೆ.
ಫ್ಯಾಷನ್, ಬಟ್ಟೆ, ಗಾಜೆಟ್, ಮನೆಬಳಕೆಯ ವಸ್ತುಗಳು ಮತ್ತು ಇತರ ಹಲವು ಉತ್ಪನ್ನಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ರಿಯಾಯಿತಿ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಲುಲು ಕನೆಕ್ಟ್ಸ್‌ನಲ್ಲಿ ಎಲೆಕ್ಟ್ರಾನಿಕ್ ಗಾಜೆಟ್‌ಗಳ ಮೇಲೆ ಅತಿಹೆಚ್ಚಿನ ಪ್ರಮಾಣದ ರಿಯಾಯಿತಿ ಸಿಗಲಿದೆ.
ಲುಲು ಹೈಪರ್‌ಮಾರ್ಕೆಟ್ ಮತ್ತು ಲುಲು ಡೈಲಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ದಿನಬಳಕೆಯ ಉತ್ಪನ್ನಗಳು, ತಾಜಾ ಆಹಾರ ವಸ್ತುಗಳು, ತರಕಾರಿಗಳು, ಬೇಕರಿ ಉತ್ಪನ್ನಗಳು ಲಭ್ಯವಿದ್ದು, ಬ್ರ್ಯಾಂಡೆಡ್ ಉತ್ಪನ್ನಗಳ ಮೇಲೆ ರಿಯಾಯಿತಿ ಸಿಗಲಿದೆ.