600 ವರ್ಷಗಳ ನಂತರ ಈ ದಿನದಂದು ಸಂಭವಿಸಲಿರುವ ಶತಮಾನದ ಸುದೀರ್ಘ ಚಂದ್ರಗ್ರಹಣ..!

ನವದೆಹಲಿ: ಶತಮಾನದ ಸುಧೀರ್ಘ ಆಂಶಿಕ ಚಂದ್ರ ಗ್ರಹಣ (Lunar Eclipse) ನವೆಂಬರ್ 19 ರಂದು ಸಂಭವಿಸಲಿದೆ. ಇದು ಸುಮಾರು 600 ವರ್ಷಗಳಲ್ಲಿ ಸಂಭವಿಸಲಿರುವ ಸುದೀರ್ಘ ಗ್ರಹಣವಾಗಿದೆ. ಅಮೆರಿಕದ ಬಟ್ಲರ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಇಂಡಿಯಾನಾದ ಹಾಲ್‌ಕಾಂಬ್ ಅಬ್ಸರ್ವೇಟರಿ(ವೀಕ್ಷಣಾಲಯ) ಪ್ರಕಾರ, 'ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಶತಮಾನದ ದೀರ್ಘವಾದ ಭಾಗಶಃ ಗ್ರಹಣ
ವೀಕ್ಷಣಾಲಯ(Observatory)ಯು ಈ ಬಗ್ಗೆ ಟ್ವೀಟ್ ಮಾಡಿದ್ದು, 'ಶತಮಾನದ ಅತ್ಯಂತ ದೀರ್ಘವಾದ ಭಾಗಶಃ ಗ್ರಹಣವು ನ.19ರ ಬೆಳಿಗ್ಗೆ ಮೊದಲು ಸಂಭವಿಸುತ್ತದೆ. ಇದು 580 ವರ್ಷಗಳಲ್ಲಿ ಅತಿ ದೀರ್ಘವಾದ ಭಾಗಶಃ ಚಂದ್ರಗ್ರಹಣವೂ ಆಗಲಿದೆ!' ಎಂದು ತಿಳಿಸಿದೆ. ಅಂದು ಆಕಾಶ ವೀಕ್ಷಕರು(Sky observers) ಸೂಕ್ಷ್ಮವಾಗಿ ಬದಲಾಗುತ್ತಿರುವ ಚಂದ್ರನ ನೋಟವನ್ನು ಕಣ್ತುಂಬಿಕೊಳ್ಳಲಿದ್ದಾರೆ, ಅದು ಕೆಂಪು ಬಣ್ಣದ್ದಾಗಿರಬಹುದು. ಅಲ್ಲದೆ ಇದು ಈ ವರ್ಷದ ಕೊನೆಯ ಚಂದ್ರಗ್ರಹಣವೂ ಆಗಲಿದೆ. NASAದ ಪ್ರಕಾರ, ಈ ಅಪರೂಪದ ಘಟನೆಯು ನ.19 ರಂದು ಸುಮಾರು 2.19 ESTಕ್ಕೆ (ಭಾರತೀಯ ಕಾಲಮಾನ 12.49 PM) ಪ್ರಾರಂಭವಾಗುತ್ತದೆ.
ಈ ಸಮಯದಲ್ಲಿ ಗ್ರಹಣ ಗೋಚರಿಸುತ್ತದೆ
ಗ್ರಹಣವು 4 ಪ್ರಮುಖ ಹಂತಗಳಲ್ಲಿ ಸಂಭವಿಸುತ್ತದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ(US Space Agency) ಹೇಳಿದೆ. ಮೊದಲು 1.02 AM EST ಸಮಯದಲ್ಲಿ ಚಂದ್ರನ ಅರೆ ನೆರಳು ಅಥವಾ ಚಂದ್ರನ ನೆರಳಿನ ಹಗುರವಾದ ಭಾಗವನ್ನು ಪ್ರವೇಶಿಸುತ್ತದೆ. ಈ ಹಂತವು ಸಾಮಾನ್ಯವಾಗಿ ವಿಶೇಷ ಉಪಕರಣಗಳಿಲ್ಲದೆ ಪತ್ತೆಹಚ್ಚಲು ಕಷ್ಟಕರವಾಗಿರುತ್ತದೆ, ಏಕೆಂದರೆ ಈ ವೇಳೆ ಕತ್ತಲೆಯು ತುಂಬಾ ಕಡಿಮೆಯಾಗಿರುತ್ತದೆ. ಇದರ ನಂತರ ಚಂದ್ರನು 2.18 PM EST ಸಮಯದಲ್ಲಿ ನೆರಳಿನ ಆಳವಾದ ಭಾಗವನ್ನು ಅಥವಾ ನೆರಳನ್ನು ತಲುಪುತ್ತಾನೆ. ಬೆಳಿಗ್ಗೆ 5.47 ಕ್ಕೆ ಗರ್ಭದಿಂದ ಹೊರಬರುವವರೆಗೆ ಚಂದ್ರನು ಸುಮಾರು 3.5 ಗಂಟೆಗಳ ಕಾಲ ಆಳವಾದ ನೆರಳಿನ ಮೂಲಕ ಹಾದುಹೋಗುತ್ತಾನೆ. ಈ ಗ್ರಹಣವು ಬೆಳಿಗ್ಗೆ 6.03 ESTಕ್ಕೆ ಕೊನೆಗೊಳ್ಳುತ್ತದೆ.
ಬದಲಾಗಲಿದೆ ಚಂದ್ರನ ಬಣ್ಣ..!
ವೀಕ್ಷಣಾಲಯದ ಮಾಹಿತಿ ಪ್ರಕಾರ, ಗರಿಷ್ಟ ಗ್ರಹಣ 4.03 EST ಗಂಟೆಗೆ ಸಂಭವಿಸುತ್ತದೆ ಎಂದು ಹೇಳಿದೆ. ಚಂದ್ರ(Moon)ನ ಶೇ.97ರಷ್ಟು ಭೂಮಿಯ ನೆರಳಿನ ಗಾಢವಾದ ಭಾಗದಿಂದ ಆವರಿಸಲ್ಪಡುತ್ತದೆ, ಇದು ಬಹುಶಃ ಗಾಢವಾದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ನವೆಂಬರ್‌ನ ಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ಬೀವರ್ ಮೂನ್(Beaver Moon) ಎಂದು ಕರೆಯಲಾಗುತ್ತದೆ. ಏಕೆಂದರೆ ಬೀವರ್‌ಗಳು ಚಳಿಗಾಲಕ್ಕಾಗಿ ತಯಾರಿ ನಡೆಸುತ್ತಿವೆ. ಗ್ರಹಣದ ಕನಿಷ್ಠ ಭಾಗವು ಉತ್ತರ ಮತ್ತು ದಕ್ಷಿಣ ಅಮೆರಿಕಾ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ ಮತ್ತು ಪೆಸಿಫಿಕ್‌ನಲ್ಲಿ ಗೋಚರಿಸುತ್ತದೆ ಎಂದು ನಾಸಾ ಹೇಳಿದೆ.