ಕರ್ನಾಟಕದಲ್ಲೂ'ಡೇಟಿಂಗ್ ಆಪ್ ಲೀವ್‍ಇನ್ ರಿಲೇಷನ್‍ಶಿಪ್'

ಕರ್ನಾಟಕದಲ್ಲೂ'ಡೇಟಿಂಗ್ ಆಪ್ ಲೀವ್‍ಇನ್ ರಿಲೇಷನ್‍ಶಿಪ್'

ಬೆಂಗಳೂರು : ದೆಹಲಿಯಲ್ಲಿ ಶ್ರದ್ಧಾ ಬೀಭತ್ಸ ಹತ್ಯೆಯಾದ ಬೆನ್ನಲ್ಲೇ ಡೇಟಿಂಗ್ ಆಪ್ ಹಾವಳಿ ಹಾಗೂ ಲೀವ್‍ಇನ್ ರಿಲೇಷನ್‍ಶಿಪ್ ಕಿರಿಕ್‌ ಕರ್ನಾಟಕದಲ್ಲೂ ಹೆಚ್ಚಾಗಿದ್ದು, ಇವುಗಳ ವಿರುದ್ಧ ಕ್ರಮಕ್ಕಾಗಿ ಇದೀಗ ಮಹಿಳಾ ಆಯೋಗ ಫೀಲ್ಡ್ ಗಿಳಿದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ಸಂದೇಶ ಸಾರೋದಕ್ಕೆ ಮುಂದಾಗಿದೆ.

ಕಾಲೇಜುಗಳಲ್ಲಿ ವಿನೂತನ ಜಾಗೃತಿ

ರಾಜ್ಯಾದ್ಯಂತ ಕಾಲೇಜುಗಳಲ್ಲಿ ಮಹಿಳಾ ಆಯೋಗದ ಟೀಂಗಳಿಂದ ಸ್ಪೆಷಲ್ ಕ್ಲಾಸ್ ನಡೆಸಲಾಗುತ್ತೆ. ಸೋಷಿಯಲ್ ಮೀಡಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತೆ. ಜೊತೆಗೆ ಸ್ವಾವಲಂಬಿ ಬದುಕಿನ ಬಗ್ಗೆ ತರಗತಿಗಳಲ್ಲಿ ಹೇಳಿಕೊಡಲಾಗುತ್ತೆ. ಇತ್ತೀಚಿನ ದಿನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಲೀವ್ ಇನ್ ರಿಲೇಷನ್‍ಗಳಿಂದ ಆಗಬಹುದಾದ ತೊಡಕಿನ ಬಗ್ಗೆ ವಿವರಣೆ ನೀಡಲಾಗುತ್ತೆ. ಈ ರೀತಿಯ ಆಯಪ್‍ಗಳಿಂದ ಆಗಲಿರುವ ತೊಂದರೆಯ ಬಗ್ಗೆ ತಜ್ಞರನ್ನು ಕರೆಸಿ ವಿಶೇಷ ತರಗತಿ ನಡೆಸಲಾಗುತ್ತೆ. ಕಾಲೇಜು ಮಾತ್ರವಲ್ಲದೇ ಮಹಿಳಾ ಉದ್ಯೋಗಿಗಳು ಇರುವ ಸಂಸ್ಥೆಯಲ್ಲೂ ಕೂಡ ಜಾಗೃತಿ ತರಗತಿ ನಡೆಸಲಾಗುತ್ತದೆ.

ಈಗಾಗಲೇ ರಾಜ್ಯದಲ್ಲಿ ಲಿವ್ ಇನ್ ರಿಲೇಷನ್ ಶಿಪ್‍ನಿಂದಾಗಿ ಸಾಕಷ್ಟು ಮಹಿಳೆಯರು ತೊಂದರೆ ಅನುಭವಿಸಿದ್ದು ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ. ಜೊತೆಗೆ ಕಾಲೇಜ್ ಓದುವ ವಿದ್ಯಾರ್ಥಿಗಳು ಈ ಆಪ್‍ಗಳಿಗೆ ಆಡಿಕ್ಟ್ ಆಗಿರೋದ್ರಿಂದ ಇದ್ರಿಂದ ಹೊರಬರುವ ಬಗ್ಗೆ ಕೂಡ ಹೆಚ್ಚಿನ ಜಾಗೃತಿ ಅತ್ಯಗತ್ಯವಾಗಿದೆ.

ದೆಹಲಿಯ ಶ್ರದ್ದಾ ವಿಕಾಸ್ ವಾಲ್ಕರ್ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಕಿರಾತಕನ ಜೊತೆ ಡೇಟಿಂಗ್ ಆಪ್ ಚಾಟಿಂಗ್, ಲೀವ್ ಇನ್ ರಿಲೇಷನ್‍ನಲ್ಲಿ ಇಲ್ಲದೇ ಇದ್ದಿದ್ದರೆ ಶ್ರದ್ಧಾಳಿಗೆ ಈ ಪರಿಸ್ಥಿತಿ ಬರುತ್ತಾ ಇರಲಿಲ್ವೋನೋ. ಡೇಟಿಂಗ್ ಆಪ್‍ಗಳ ಮೂಲಕ ಮುಖವಾಡ ಧರಿಸಿಕೊಂಡಿರುವ ಇಂತಹ ಕ್ರಿಮಿಗಳ ಕಾಟದಿಂದ, ನರರಾಕ್ಷಸರ ಜೊತೆ ಲೀವ್ ಇನ್ ರಿಲೇಷನ್‍ನಲ್ಲಿರೋದ್ರಿಂದ ಅದೆಷ್ಟೋ ಹುಡ್ಗೀರ ಬದುಕು ಬರ್ಬಾದ್ ಆಗಿದೆ. ಕರ್ನಾಟಕದಲ್ಲಿ ಅದರಲ್ಲೂ ನಗರ ಪ್ರದೇಶದಲ್ಲಿ ಈ ಆಪ್‍ಗಳ ರಿಲೇಷನ್‍ಶಿಪ್‍ನ ವಿಷವರ್ತುಲದಲ್ಲಿ ಹೆಣ್ಣುಮಕ್ಕಳು ಸಿಕ್ಕಿಹಾಕಿಕೊಂಡಿದ್ದಾರೆ. ಹೀಗಾಗಿ ಜಾಗೃತಿಗಾಗಿ ಕರ್ನಾಟಕ ಮಹಿಳಾ ಆಯೋಗ ಈ ಮಹತ್ಕಾರ್ಯಕ್ಕೆ ಮುಂದಾಗಿದೆ ಎಂದು ಮಾಹಿತಿ ತಿಳಿದುಬಂದಿದೆ