ಫಿಫಾ ವಿಶ್ವಕಪ್ ಟೂರ್ನಿಯಲ್ಲೂ ಸಂಜು ಸ್ಯಾಮ್ಸನ್ ಹವಾ

ಸಂಜು ಸ್ಯಾಮ್ಸನ್ ಅವರಿಗೆ ಜನಬೆಂಬಲ ಕೇವಲ ಕ್ರಿಕೆಟ್ನಿಂದ ಮಾತ್ರವಲ್ಲ, ಸದ್ಯ ಕತಾರ್ನಲ್ಲಿ ಸಾಗುತ್ತಿರುವ ಫಿಫಾ ವಿಶ್ವಕಪ್ 2022 ಟೂರ್ನಿಯಲ್ಲೂ ಇವರ ಹವಾ ಜೋರಾಗಿದೆ. ಸಂಜು ಸ್ಯಾಮ್ಸನ್ ಅವರ ಫೋಟೋಗಳು, ಬ್ಯಾನರ್ಗಳು ಫುಟ್ಬಾಲ್ ವಿಶ್ವಕಪ್ನ ಅನೇಕ ಪಂದ್ಯಗಳಲ್ಲಿ ರಾರಾಜಿಸುತ್ತಿವೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.