ಮೈಸೂರಿನಲ್ಲಿ ನಾಲ್ವರು ರೌಡಿಶೀಟರ್‌ಗಳ ಗಡಿಪಾರು : ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಆದೇಶ

ಮೈಸೂರಿನಲ್ಲಿ ನಾಲ್ವರು ರೌಡಿಶೀಟರ್‌ಗಳ ಗಡಿಪಾರು : ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಆದೇಶ

ಮೈಸೂರು : ಜಿಲ್ಲೆಯಲ್ಲಿ ಬೆದರಿಕೆ, ಜಗಳ , ಕೊಲೆ ಹೀಗೆ ಅನೇಕ ಪ್ರಕರಣಗಳಿಗೆ ಸಂಬಂಧ ಪಟ್ಟ ನಾಲ್ವರು ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲು ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಆದೇಶ ಹೊರಡಿಸಿದ್ದಾರೆ.

ಸತೀಶ್‌, ಮಧುಸೂದನ್‌,ಮಂಜುನಾಥ್‌, ಕುಮಾರ್‌ ಎಂಬ ರೌಡಿಶೀಟರ್‌ಗಳನ್ನು ಗಡಿಪಾಡು ಮಾಡಲಾಗಿದೆ.ಯರಗಹಳ್ಳಿಯ ರೌಡಿ ಸತೀಶ್‌, ವೀರನಗರೆಯ ಮಧುಸೂಧನ್‌ ಇಟ್ಟಿಗೆಗೂಡು ಬಡಾವಣೆಯ ರೌಡಿಶೀಟರ್‌ ಮಂಜುನಾಥ್‌, ಮಹದೇವಪುರ ರೌಡಿಶೀಟರ್‌ ಕುಮಾರ್‌ ಗಡಿಪಾರು ಮಾಡಲಾಗಿದೆ.

ಸತೀಶ್‌ ವಿರುದ್ಧ 5 ಪ್ರಕರಣ ಹಾಗೂ ಮಧುಸೂಧನ್‌ ವಿರುದ್ಧ 4 ಕೇಶ್‌ ಮಂಜುನಾಥ್‌ ವಿರುದ್ಧ 8, ಕುಮಾರ್‌ ವಿರುದ್ಧ 7 ಕೇಸ್‌ಗಳಿವೆ. ಬೆದರಿಕೆ, ಜಗಳ , ಕೊಲೆ ಯತ್ನ, ಶಾಂತಿಭಂಗ ಮಾಡುವುದು ಸಮಾಜದ ಸ್ವಾಸ್ತ್ಯ ಹಾಳುಮಾಡುತ್ತಿದ್ದ ಹಿನ್ನೆಲೆ ಗಡಿಪಾರು ಮಾಡಲಾಗುತ್ತಿದೆ ಎಂದು ಪೊಲೀಸ್‌ಆಯುಕ್ತ ರಮೇಶ್‌ ಬಾನೋತ್‌ ಆದೇಶ ನೀಡಿಲಾಗಿದೆ.