ಪೋಷಣಾ ಅಭಿಯಾನ ಗರ್ಭಿಣಿಯರಿಗೆ ಸೀಮಂತ
ಶಿಗ್ಗಾಂವಿ
ಶಿಗ್ಗಾAವಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಿದರು. ರಾಷ್ಟ್ರೀಯ ಪೋಷಣಾ ಅಭಿಯಾನ ಪೋಷಣಾ ಮಾಸಾಚರಣೆ ಮಾತೃವಂದನಾ ಸಪ್ತಾಹ ಉದ್ಘಾಟಿಸಿದ ಶಿಗ್ಗಾಂವಿ ಜೆ.ಎಮ್.ಎಫ್.ಸಿ.ನ್ಯಾಯಲಯದ ನ್ಯಾಯಾಧೀಶರಾದ ಶ್ರೀದೇವಿ ದರಬಾರೆ ಅವರು ಮಾತನಾಡಿ, ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಮಹಿಳೆಯರು ಹಿರಿಯ ನಾಗರಿಕರು ಆರೋಗ್ಯವಂತರನ್ನಾಗಿ ರೂಪಿಸುವ ಸಲುವಾಗಿ ಪೋಷಣಾ ಅಭಿಯಾನ ಪೌಷ್ಟಿಕ ಕರ್ನಾಟಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಸಿಡಿಪಿಓ ನೀತಾ ವಾಡಕೇರ, ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ತಾಲೂಕಾ ಆರೋಗ್ಯ ಅಧಿಕಾರಿ ಸುರೇಶ, ನಿರ್ಮಾಲಾ ಇಟ್ಟಗಿ, ನ್ಯಾಯವಾದಿ ಚನ್ನಮ್ಮ ಬಡ್ಡಿ, ಅಂಗವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.