ಗ್ರಾಮದ ಗೋಮಾಳ್ ಭೂಮಿ ರಕ್ಷಿಸುವಂತೆ ಫೇಸ್ಬುಕ್ ನಲ್ಲಿ ಯುವಕನ ಅಳಲು ಜಿಲ್ಲಾಧಿಕಾರಿ ಸ್ಪಂದನೆ

ತಾಲೂಕಿನ ಉಜ್ಜನಿ ಗ್ರಾಮದ ಸರ್ವೇ ನಂಬರ್ 27 ರ 140 ಎಕರೆ ಗೋಮಾಳ್ ಭೂಮಿಯಿದ್ದು,ಈ ಭೂಮಿ ಗ್ರಾಮದ ಜಾನವರುಗಳಿಗೆ ಮೇವಿನ ತಾನವಾಗಿತ್ತು. ಆದರೆ ಇತ್ತೀಚಿಗೆ ಈ ಗೋಮಾಳ್ ಜಮೀನಿನ ಮೇಲೆ ಶ್ರೀಮಂತ ರೈತರ ಕಣ್ಣುಬಿದ್ದಿದೆ. ರಾತೋರಾತ್ರಿ ಅತಿಕ್ರಮಣ ಮಾಡಿ ಜಾನುವಾರಗಳಿಗೆ ಮೇವು ಸಿಗದಂತೆ ಮಾಡಿದ್ದಾರೆ ಎಂದು ಯುವಕ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡಿದ್ದ, ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಿ ಸ್ಥಳ ಪರಿಶೀಲಿಸಿ ಕ್ರಮಕ್ಕೆ ಮುಂದಾಗಿದೆ