ಮಧ್ಶ ಮಹೇಶ್ವರ" ದೈವದ ಉತ್ಸವ ಮೂರ್ತಿ

೨೨ ರಿಂದ ಪಯಣ ಬೆಳಿಸಿ ೨೪ ನೇ, ಮೇ ೨೦೨೧ ಕ್ಕೆ, ಮಧ್ಯ ಮಹೇಶ್ವರ ನ ಮೂಲ ಸ್ಥಾನದಲ್ಲಿ ಪೂಜೆ ಪ್ರಾರಂಭವಾಗುವುದು..... ಶ್ರೀ ಹಿಮವತ್ಕೇದಾರ ವೈರಾಗ್ಯ ಸಿಂಹಾಸನ ಮಹಾ ಸಂಸ್ಥಾನದಲ್ಲಿ, ಕೇದಾರನಾಥ ರಾವಲ್ ಜಗದ್ಗುರು ಭಿಮಾಶಂಕರಲಿಂಗ ಭಗವತ್ಪಾದರ ಸಾನಿಧ್ಯದಲ್ಲಿ, ಉತ್ತರಾಖಂಡ ರಾಜ್ಯದ ಕುಲದೈವ, ದ್ವಿತೀಯ ಕೇದಾರನಾಥ, ಇಷ್ಟಾರ್ಥಗಳನ್ನು ಅನುಗ್ರಹಿಸುವ ಕ್ಷೇತ್ರದೊಡೆಯ, "ಮಧ್ಶ ಮಹೇಶ್ವರ" ದೈವದ ಉತ್ಸವ ಮೂರ್ತಿ ಡೋಲಿ ಪ್ರಸ್ಥಾನ್ ಕಾರ್ಯಕ್ರಮ. ಶೀತ ಕಾಲದ ಆರು ತಿಂಗಳು ಊಖೀಮಠದಲ್ಲಿರುವ ಕೇದಾರ ಪೀಠದಲ್ಲಿ ಪೂಜೆಗೊಳ್ಳುತಿತ್ತು. ಈ ದೈವಕ್ಕೆ ಕಳೆದ ಎರಡು ದಿನಗಳಿಂದ ನಡೆದ ಧಾರ್ಮಿಕ ವಿಧಿ ವಿಧಾನಗಳು ಇಂದು ಮಹಾಭಿಷೇಕ ಸಹಸ್ರ ಕಮಲಾರತಿಯೊಂದಿಗೆ ಪೂರ್ಣವಾಗಿ ಪ್ರಯಾಣ ಆರಂಭಮಾಡಿತು. ಮಧ್ಯಮೇಶ್ವರ ಸ್ವಾಮಿಯ ಪ್ರಧಾನ ಅರ್ಚಕರಾಗಿ ಈವರೆಗೂ ಜಗದ್ಗುರುಗಳ ಆಪ್ತ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಲಿಂಗ ಸ್ವಾಮಿ ಚಪ್ಟಾ ನೇಮಕಗೊಂಡಿದ್ದಾರೆ. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಶ್ರೀಗಳು, ಮಂದಿರ ಸಮಿತಿ ಅಧಿಕಾರಿಗಳು, ಊಖೀಮಠ ಹಾಗೂ ರಾಜ್ಯದ ಕೆಲ ಪ್ರಮುಖರು ಪಾಲ್ಗೊಂಡಿದ್ದರು.