ಯಶ್ ಜೊತೆ ಸಿನಿಮಾ ಮಾಡುತ್ತೇವೆ ಆದರೆ ಕಾಯಬೇಕು ಎಂದ ಹೊಂಬಾಳೆ ಫಿಲ್ಮ್ಸ್

ಯಶ್ ಜೊತೆ ಸಿನಿಮಾ ಮಾಡುತ್ತೇವೆ ಆದರೆ ಕಾಯಬೇಕು ಎಂದ ಹೊಂಬಾಳೆ ಫಿಲ್ಮ್ಸ್

ಮುಂದಿನ ದಿನಗಳಲ್ಲಿ ಯಶ್ ಜೊತೆ ಸಿನಿಮಾ ಮಾಡುವುದು ನಿಶ್ಷಿತ. ಆದರೆ ಅದಕ್ಕಾಗಿ ಸ್ಪಲ್ವ ಸಮಯ ಕಾಯಬೇಕು ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ.

ಕೆಜಿಎಫ್ 2 ಮುಗಿದ ತಕ್ಷಣವೇ ಕೆಜಿಎಫ್ 3 ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಕೈಗೆತ್ತಿಕೊಳ್ಳಲಿದೆ ಎಂದು ಹೇಳಲಾಗಿತ್ತು.

ಈ ಕುರಿತು ಹಲವು ಚರ್ಚೆಗಳೂ ನಡೆದವು. ಆದರೆ, ಸದ್ಯಕ್ಕೆ ಆ ಟಾಫಿಕ್ ಗೆ ಫುಲ್ ಸ್ಟಾಪ್ ಇಡಲಾಗಿದೆ. ಯಶ್ ಬೇರೊಂದು ಸಿನಿಮಾ ಮಾಡುತ್ತಿರುವುದರಿಂದ ಯಶ್ ಜೊತೆಗಿನ ಚಿತ್ರಕ್ಕಾಗಿ ಕಾಯುವುದು ಅನಿವಾರ್ಯವಾಗಿದೆ. ಈ ಕಾಯುವಿಕೆ ಇನ್ನೆಷ್ಟು ವರ್ಷ ಎನ್ನುವುದು ಸದ್ಯಕ್ಕಿರುವ ಕುತೂಹಲವಾಗಿದೆ.

ಯಶ್ ನಟನೆಯ ಮುಂದಿನ ಸಿನಿಮಾದ ಬಗ್ಗೆ ಆರೇಳು ತಿಂಗಳಿಂದ ಹೊಸ ಹೊಸ ಸುದ್ದಿಗಳು ಹರಿದಾಡುತ್ತಲೆ ಇವೆ. ಆದರೆ, ಇತ್ತೀಚೆಗಷ್ಟೇ ಅವರ ಹೊಸ ಸಿನಿಮಾದ ಅಚ್ಚರಿಯ ಸಂಗತಿಯೊಂದು ಹೊರ ಬಿದ್ದಿತ್ತು. ಅವರ ಮುಂದಿನ ಸಿನಿಮಾ ಬಜೆಟ್ ಬರೋಬ್ಬರಿ 400 ಕೋಟಿ ಎಂದು ಹೇಳಲಾಗಿತ್ತು. ಈ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವ ಸಂಸ್ಥೆ ಕೆವಿಎನ್ ಎಂದು ಹೇಳಲಾಗಿತ್ತು. ಅದೀಗ ನಿಜ ಎನ್ನುವಂತೆ ಸಾಕ್ಷಿಯೊಂದು ಸಿಕ್ಕಿದೆ.

ಯಶ್ ನಟನೆಯ 19ನೇ ಸಿನಿಮಾವನ್ನು ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಮಾಡಲಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಕೆವಿಎನ್ ಪ್ರೊಡಕ್ಷನ್ ನ ವೆಂಕಟ್ ಕೋಣಂಕಿ ನಾರಾಯಣ್ ಅವರು ಯಶ್ ಜೊತೆ ಕಾಣಿಸಿಕೊಂಡಿದ್ದಾರೆ. ಹುಟ್ಟು ಹಬ್ಬದ ಪಾರ್ಟಿಯಲ್ಲಿ ವೆಂಕಟ್ ಕೂಡ ಭಾಗಿಯಾಗಿ ಶುಭ ಹಾರೈಸಿದ್ದಾರೆ. ಹಾಗಾಗಿ ಇವರೇ ಮುಂದಿನ ಸಿನಿಮಾದ ನಿರ್ಮಾಪಕರು ಎನ್ನುವುದು ಪಕ್ಕ ಆಗಿದೆ.