ಸಿದ್ದರಾಮಯ್ಯ ಸೋಲಿಸಲು ಬಿಜೆಪಿ ರಣತಂತ್ರ; ವರುಣಾದಲ್ಲಿ ವಿಜಯೇಂದ್ರ ಕಣಕ್ಕಿಳಿಸಲು ಹೈಕಮಾಂಡ್ ಪ್ಲ್ಯಾನ್

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಕಾಂಗ್ರೆಸ್ ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದೆ.
ಒಂದು ವೇಳೆ ಸಿದ್ದರಾಮಯ್ಯ ವರುಣಾದಲ್ಲಿ ನಿಂತ್ರೆ ಶಿಕಾರಿಪುರದ ಜೊತೆ ವರುಣಾದಲ್ಲೂ ವಿಜಯೇಂದ್ರ ಸ್ಪರ್ಧೆಗೆ ಇಳಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿದೆ.
ಹಾಲಿ ಕ್ಷೇತ್ರ ಬಾದಾಮಿಯಲ್ಲೇ ನಿಂತ್ರೆ ಶ್ರೀರಾಮುಲುಯಿಂದಲೇ ಟಕ್ಕರ್ ಕೊಡುಲು ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಬಿಜೆಪಿ ಸ್ಟಾರ್ ಕ್ಯಾಂಡಿಡೇಟ್‌ಗಳನ್ನೇ ಹಾಕಬೇಕು ಎಂದು ಲೆಕ್ಕಾಚಾರ ಹಾಕಿದೆ.
ಹೈಕಮಾಂಡ್‌ನ ನಾಯಕರೊಬ್ಬರಿಂದ ಸಿದ್ದರಾಮಯ್ಯರನ್ನ ಕಟ್ಟಿಹಾಕುವ ಗೇಮ್ ಪ್ಲ್ಯಾನ್ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಸಿದ್ದರಾಮಯ್ಯಗೆ ಟಫ್ ಸ್ಪರ್ಧೆ ಕೊಡುವ ಅಭ್ಯರ್ಥಿ ಹಾಕಿದ್ರೆ ಬೇರೆ ಕ್ಷೇತ್ರಗಳಲ್ಲಿ ಲಾಭದ ಲೆಕ್ಕಚಾರ ಮಾಡಿದೆ. ಪ್ರಚಾರದ ಕಡೇ ದಿನಗಳಲ್ಲಿ ಸಿದ್ದು ಸ್ಪರ್ಧೆ ಕ್ಷೇತ್ರದಲ್ಲೇ ಹೆಚ್ಚು ಪ್ರಚಾರ ಮಾಡುವಂತಾದ್ರೆ ಬೇರೆ ಕಡೆ ಲಾಭ ಎಂಬ ತಂತ್ರ ಬಿಜೆಪಿಯದ್ದಾಗಿದೆ.