ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಸಿಎಂ ಬಸವರಾಜ ಬೊಮ್ಮಾಯಿ ಅವರು ಸದ್ಯ ಸಂಪುಟ ವಿಸ್ತರಣೆ ಬಗ್ಗೆ ನಾನು ಏನು ಹೇಳುವುದಿಲ್ಲ ಅಂತ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡಿ, ಸಿಎಂ ವಿಶ್ರಾಂತಿ ಪಡೆದು ಕೆಲಸ ಮಾಡಲಿ ಅಂತ ಹೇಳಿದ್ದ ಮೂಡಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿವರ ಹೇಳಿಕೆಗೆ ಸಂಬಂಧಪಟ್ಟಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರು, ಎಂ.ಪಿ ಕುಮಾರಸ್ವಾಮಿಗೆ ನನ್ಮೇಲೆ ಬಹಳ ಪ್ರೀತಿ ಇದೆ ಅಂತ ತಿರುಗೇಟು ನೀಡಿದರು.

ಇದೇ ವೇಳೆ ಅವರು ಮಾತನಾಡಿ, ವರ್ಷಪೂರ್ತಿ ದಿನಾಲು 15 ಗಂಟೆ ಕೆಲಸ ಮಾಡೋ ಸಂಕಲ್ಪ ಮಾಡಿದ್ದೀನಿ.

2023ಕ್ಕೆ ಬಿಜೆಪಿ ಅಧಿಕಾರಕ್ಕೆ ತರೋದೆ ನನ್ನ ಗುರಿ. ಈಗಿನಿಂದಲೇ ಅದನ್ನ ಸ್ಟಾರ್ಟ್​ ಮಾಡುವೆ ಅಂತ ವಿರೋಧಿಗಳಿಗೆ ಖಡಕ್‌ ಉತ್ತರಿಸಿದರು.