ಮಂಗಳೂರು | ಅಲೋಶಿಯಸ್ ಕಾಲೇಜಿನಲ್ಲಿ 'ಪೊಸವೊಸರ್' ರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಪಿಯು ವಿದ್ಯಾರ್ಥಿಗಳಿಗೆ 'ಪೊಸವೊಸರ್' ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಸ್ಪರ್ಧೆಗಳನ್ನು ಗುರುವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪದ್ಮಶ್ರೀ ಅಮೈ ಪುರಸ್ಕೃತ ಮಹಾಲಿಂಗ ನಾಯ್ಕ ಅವರು ನೂತನವಾಗಿ ಪರಿಚಯಿಸಲಾದ ಐಚ್ಛಿಕ ವಿಷಯ ಕನ್ನಡ ಮೇಜರ್ ಹಾಗೂ ಮೋಸ್ಚೆನಿ ಕ್ರಿಯೇಟಿವ್ ಕಮ್ಯುನಿಕೇಶನ್ ಡಿಪ್ಲೊಮಾ ಕೋರ್ಸ್ ಅನ್ನು ಉದ್ಘಾಟಿಸಿದರು.
ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ.ಫಾ.ಮೆಲ್ವಿನ್ ಜೆ. ಪಿಂಟೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪರಿಸರ ಹೋರಾಟಗಾರ ಶ್ರೀಪಡ್ರೆ, ಪ್ರಾಂಶುಪಾಲರಾದ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಕಾಲೇಜಿನ ರಿಜಿಸ್ಟ್ರಾರ್ ಮತ್ತು ಪರೀಕ್ಷಾ ನಿಯಂತ್ರಕ ಡಾ.ಆಲ್ವಿನ್ ಡೇಸಾ, ಹಣಕಾಸು ಅಧಿಕಾರಿ ರೆ.ಫಾ.ವಿನ್ಸೆಂಟ್ ಪಿಂಟೋ, ಅಮೈ ಮಹಾಲಿಂಗನಾಯ್ಕರ ಪತ್ನಿ ಲಲಿತಾ, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಅಧ್ಯಕ್ಷೆ ಮತ್ತು ಕಾಮಧೇನು ಚಾರಿಟೇಬಲ್ ಟ್ರಸ್ಟ್‌ನ ದಿವ್ಯಪ್ರಭಾ ಗೌಡ, ವಿವಿಧ ಬ್ಲಾಕ್‌ಗಳ ನಿರ್ದೇಶಕರಾದ ಡಾ.ಚಾರ್ಲ್ಸ್ ಫುರ್ಟಾಡೊ, ಡಾ.ಡೆನಿಸ್ ಫೆರ್ನಾಂಡಿಸ್, ಡಾ.ಲವೀನಾ ಲೋಬೋ, ಡಾ.ರಿಚರ್ಡ್ ಗೊನ್ಸಾಲ್ವಿಸ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಹಾಲಿಂಗ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪದ್ಮಶ್ರಿ ಮಹಾಲಿಂಗ ನಾಯ್ಕರನ್ನು ಗೌರವಿಸಲಾಯಿತು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವನಾಥ ಬದಿಕಾನ, ಅರೆಭಾಷೆ ನಿಘಂಟು ಸೇರಿದಂತೆ ಅರೆಭಾಷೆಗೆ ಸಂಬಂಧಿಸಿದ ನಾಲ್ಕು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಕ್ಕಾಗಿ ಅವರನ್ನು ಗೌರವಿಸಲಾಯಿತು. ಶ್ರೀ ಪಡ್ರೆ ಮಳೆಕೊಯ್ಲು ಬಗ್ಗೆ ಉಪನ್ಯಾಸ ನೀಡಿದರು.
ರೇಡಿಯೋ ಸಾರಂಗ್ ಆರ್‌ಜೆ ಅಭಿಷೇಕ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ಸುಧಾ ಕುಮಾರಿ ವಂದಿಸಿದರು.