'ದೇವ್ರು ನಮ್ಗೆ ಯಾಕ್ ಪದೇ ಪದೆ ನೋವು ಕೊಡ್ತಾನೋ ಗೊತ್ತಿಲ್ಲ: ನಟ ಶಿವರಾಮ್ ನೋಡಿ ಶಿವಣ್ಣ ಭಾವುಕ

'ದೇವ್ರು ನಮ್ಗೆ ಯಾಕ್ ಪದೇ ಪದೆ ನೋವು ಕೊಡ್ತಾನೋ ಗೊತ್ತಿಲ್ಲ: ನಟ ಶಿವರಾಮ್ ನೋಡಿ ಶಿವಣ್ಣ ಭಾವುಕ

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರು ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಟ ಶಿವರಾಂ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಶಿವರಾಂ ಅವರು ನಮ್ಮ ಫ್ಯಾಮಿಲಿಯ ಒಬ್ಬರಾಗಿದ್ದರು.

ಅವರನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಾ ಬೆಳೆದಿದ್ದೇವೆ. ಶಿವರಾಮಣ್ಣನನ್ನು ದೇವರು ಕೈ ಬಿಡಲ್ಲ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.

ಈಗಾಗಲೇ ನಾವು ತಮ್ಮನನ್ನು ಕಳೆದುಕೊಂಡ ನೋವಲ್ಲಿ ಇದ್ದೇವೆ. ದೇವರು ನಮಗೆ ಯಾಕೆ ಪದೇ ಪದೇ ಇತರ ನೋವು ಕೊಡ್ತಾನೋ ಗೊತ್ತಿಲ್ಲ ಎಂದು ಕಣ್ಣೀರು ತೋಡಿಕೊಂಡರು.ಈ ಪರಿಸ್ಥಿತಿಯಲ್ಲಿ ಅವರನ್ನ ನೋಡೋಕೆ ತುಂಬಾ ಕಷ್ಟ. ಮತ್ತೆ ಅವರು ಗುಣಮುಖರಾಗಿ ಬರಬೇಕು ಅನ್ನೋ ಆಸೆ ನಮಗೆ ಇದೆ ಎಂದು ಶಿವಣ್ಣ ಭಾವುಕರಾಗಿ ಮಾತನಾಡಿದ್ದಾರೆ.