ಉಚಿತ ಪಡಿತರ ಯೋಜನೆ ವಿಸ್ತರಣೆ ಸಾಧ್ಯತೆ: ಶೋಭಾ ಕರಂದ್ಲಾಜೆ

ಉಚಿತ ಪಡಿತರ ಯೋಜನೆ ವಿಸ್ತರಣೆ ಸಾಧ್ಯತೆ: ಶೋಭಾ ಕರಂದ್ಲಾಜೆ

ಬೆಂಗಳೂರು: ಡಿಸೆಂಬರ್ ನಂತರವೂ ಬಡವರಿಗೆ ಉಚಿತ ಪಡಿತರ ನೀಡಲು ಪಿಎಂಜಿಕೆಎವೈ ಯೋಜನೆಯನ್ನು ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಯೋಜನೆಯಡಿ 80 ಕೋಟಿ ಬಡವರಿಗೆ ತಿಂಗಳಿಗೆ 5 ಕೆಜಿ ಗೋಧಿ & ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಹಾಗಾಗಿ ಶುಕ್ರವಾರ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಯೋಜನೆ ಕುರಿತು ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ.