ಶಾಲಾ ಪಠ್ಯಪುಸ್ತಕದಲ್ಲಿ 'ಭಗವದ್ಗೀತೆ' ಅಳವಡಿಕೆ; ಕೇಂದ್ರ ಸರ್ಕಾರ
ನವದೆಹಲಿ: ಶ್ರೀಮದ್ ಭಗವದ್ಗೀತೆಯನ್ನ ಈಗ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದೆ. '6 & 7ನೇ ತರಗತಿಗಳಲ್ಲಿ ಭಗವದ್ಗೀತೆ & ಅದರ ಶ್ಲೋಕಗಳ ಉಲ್ಲೇಖಗಳನ್ನ 11 & 12ನೇ ತರಗತಿಗಳ ಸಂಸ್ಕೃತ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದೆ' ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. ಹೆಚ್ಚಿನ ಸಂಶೋಧನೆ & ಸಾಮಾಜಿಕ ಅನ್ವಯಗಳಿಗಾಗಿ ಐಕೆಎಸ್ ಜ್ಞಾನವನ್ನ ಸಂರಕ್ಷಿಸುವ ಉದ್ದೇಶದಿಂದ ಶಿಕ್ಷಣ ಮಂಡಳಿಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ ವಿಭಾಗವನ್ನು ಸ್ಥಾಪಿಸಿದೆ ಎಂದು ಹೇಳಿದೆ.