ಕ್ಷೇತ್ರಕ್ಕೆ ಹೋಗದಿದ್ದರೂ ಜನ ನನ್ನ ಗೆಲ್ಲಿಸ್ತಾರೆ: ಮಾಜಿ ಸಚಿವ ವಿನಯ ಕುಲಕರ್ಣಿ
ಶಿಗ್ಗಾಂವ: ಧಾರವಾಡ-71 ಕ್ಷೇತ್ರಕ್ಕೆ ನಾನು ಹೋಗಲು ಆಗದಿದ್ದರೂ ನನ್ನ ಪ್ರೀತಿಯ ಜನರು ನನ್ನ ಗೆಲ್ಲಿಸುತ್ತಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.
ಶಿಗ್ಗಾಂವ ಬಳಿಯಲ್ಲಿ ಕ್ಷೇತ್ರದ ಜನರೊಂದಿಗೆ ಭೇಟಿಯ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಕ್ಷೇತ್ರದಲ್ಲಿ ಜನರು ಸಾಕಷ್ಟು ಪ್ರೀತಿಯನ್ನ ತೋರಿಸುತ್ತಾರೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಲ್ಲಿವೆ ಎಂದು ಹೇಳಿದರು.