ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಆರೋಪ : ಇಬ್ಬರ ವಿರುದ್ಧ ದೂರು ದಾಖಲು

ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಆರೋಪ : ಇಬ್ಬರ ವಿರುದ್ಧ ದೂರು ದಾಖಲು

ಮಂಗಳೂರು : ಮಂಗಳೂರಿನಲ್ಲಿ ಮತಾಂತರ ಆರೋಪ ಕೇಳಿ ಬಂದಿದ್ದು, ಹಿಂದೂ ಯುವತಿಯನ್ನುಇಸ್ಲಾಂಗೆ ಮತಾಂತರಿಸಿದ ಆರೋಪದಲ್ಲಿ ಪ್ರಸಿದ್ಧ ವೈದ್ಯೆ ಹಾಗೂ ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲಾಗಿದೆ.

ಮಂಗಳೂರಿನ ಶಿವಾನಿ ಎಂಬ ಯುವತಿಗೆ ಕೆಲಸ ನೀಡುವ ಆಮೀಷವೊಡ್ಡಿ ಬಳಿಕ ಇಸ್ಲಾಮ್‍ಗೆ ಮತಾಂತರ ನಡೆಸಿ ಆಯೇಷಾ ಎಂದು ಹೆಸರು ಬದಲಾಯಿಸಿದ್ದಾರೆ ಎಂದು ನೊಂದ ಯುವತಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಕುಲಶೇಖರದ ಮೊಬೈಲ್ ಅಂಗಡಿಯ ಖಲೀಲ್ ಎಂಬಾತ ಆತನ ಸಂಬಂಧಿಕರ ಮನೆಯಲ್ಲಿ ಕೆಲಸವಿದೆ ಎಂದು ಮಂಗಳೂರಿನ ಪ್ರಸಿದ್ಧ ಹೆರಿಗೆ ವೈದ್ಯೆ ಡಾ.ಜಮೀಲಾ ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡಿದ್ದೆ. ಅಲ್ಲಿ ಕುರಾನ್ ಓದಲು ಹೇಳಿ ನಮಾಜ್ ಮಾಡಿಸಿ ಮತಾಂತರಕ್ಕೆ ಪ್ರಯತ್ನಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.