ಆರ್ಯಾನ್ ಖಾನ ಜಾಮೀನು ತಿರಸ್ಕಾರ

ಬಾಲಿವುಡ್ ನಟ ಶಾರೂಖ ಖಾನ್ ಪುತ್ರ ಆರ್ಯನ್ ಖಾನ್ಗೆ ಜಾಮೀನು ನೀಡುವ ವಿಷಯದಲ್ಲಿ ಮುಂಬೈ ವಿಶೇಷ ನ್ಯಾಯಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. ಆರ್ಯಾನ ಖಾನ್ಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ, ಎನ್.ಡಿ.ಪಿ,ಎಸ್. ವಿಶೇಷ ನ್ಯಾಯಾಲಯದಿಂದ ಬುಧವಾರ ಮಧ್ಯಾಹ್ನ ಮಹತ್ವದ ತೀರ್ಪು ಹೊರಬಂದಿದೆ. ಆರ್ಯನ್ ಖಾನ್ ಸೇರಿ ಇನ್ನೂ ಇಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ, ಕ್ರೂಸ್ ಶಿಪ್ ಡ್ರಗ್ ಕೇಸ್ನಲ್ಲಿ ಬಂಧಿತನಾಗಿದ್ದ ಆರ್ಯನ್ ಖಾನ್ಗೆ ಜಾಮೀನು ನೀಡಲು ನಿರಾಕರಿಸಲಾಗಿದೆ. ಇದರಿಂದಾಗಿ ಆರ್ಯನ್ ಖಾನ್ ಜೈಲಿನಲ್ಲಿಯೇ ಕೊಳೆಯುವಂತಾಗಿದೆ. ಸದ್ಯ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸುವದರಿಂದ ಮುಂದೇನು ಎಂದು ಎಲ್ಲರೂ ಚರ್ಚಿಸುವಂತಾಗಿದೆ. ವಿಶೇಷ ನ್ಯಾಯಾಲಯ ಜಾಮೀನು ತಿರಸ್ಕರಿಸಿರುವುದಿಂದ ಇದೀಗ ಹೈಕೋರ್ಟ ಬಾಗಿಲು ತಟ್ಟಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಬಾಲಿವುಡ್ ನಟ ಶಾರೂಖಖಾನ್ ಮಗನ ಜಾಮೀನಿಗೆ ಹೈಕೋರ್ಟಗೆ ಹೋಗುತ್ತಾರಾ? ಹೈಕೋರ್ಟನಲ್ಲಾದರೂ ಜಾಮೀನು ಸಿಗುತ್ತಾ? ಅಥವಾ ಜೈಲಿನಲ್ಲೆ ಕೊಳೆಯಬೇಕಾಗುತ್ತಾ? ಇನ್ನೂ ಎಷ್ಟು ದಿವಸವಿರಲಿದೆ ಆರ್ಯನ ಖಾನ್ ಜೈಲು ವಾಸ ಎನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.