ಒಂದೇ ಕಾರ್ಯಕ್ರಮದಲ್ಲಿ 4 ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ʼRRRʼ

ಲಾಸ್ ಏಂಜಲೀಸ್: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವ ʼಆರ್ ಆರ್ ಆರ್ʼ ಇತ್ತೀಚೆಗಷ್ಟೇ ಕ್ರಿಟಿಕ್ಸ್ ಚಾಯ್ಸ್ ಸೂಪರ್ ಅವಾರ್ಡ್ಸ್ʼ ನ ಎರಡು ವಿಭಾಗದಲ್ಲಿ 'ಆರ್ ಆರ್ ಆರ್' ಸಿನಿಮಾ ನಾಮಿನೇಟ್ ಆಗಿದೆ. ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ.
ಅಮೆರಿಕಾದಲ್ಲೇ ಬೀಡು ಬಿಟ್ಟಿರುವ ʼಆರ್ ಆರ್ ಆರ್ʼ ತಂಡ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಕೊಡಮಾಡುವ ಪ್ರಶಸ್ತಿಯನ್ನು ಪಡೆದುಕೊಂಡಿದೆ. 6ನೇ ವರ್ಷದ ಕ್ರಿಟಿಕ್ಸ್ ಅಸೋಸಿಯೇಷನ್ ನ ( Hollywood Critics Association) ಹೆಚ್ ಸಿಎ ಫಿಲ್ಮ್ ಅವಾರ್ಡ್ ನ್ನು ಪಡೆದುಕೊಂಡಿದೆ.
ಬೆಸ್ಟ್ ಆಯಕ್ಷನ್ ಫಿಲ್ಮ್ ಅವಾರ್ಡ್ ವಿಭಾಗದಲ್ಲಿ ʼ ದಿ ಬ್ಯಾಟ್‌ಮ್ಯಾನ್ʼ, ʼ ಟಾಪ್ ಗನ್: ಮೇವರಿಕ್ʼ, ʼದಿ ವುಮನ್ ಕಿಂಗ್ʼ,ʼ ಬ್ಲ್ಯಾಕ್ ಪ್ಯಾಂಥರ್ ವಕಾಂಡಾ ಫಾರೆವರ್ʼ ಸಿನಿಮಾದೊಂದಿಗೆ ʼಆರ್ ಆರ್ ಆರ್ʼ ನಾಮಿನೇಟ್ ಆಗಿತ್ತು. ಈ ವಿಭಾಗದಲ್ಲಿ ಬೆಸ್ಟ್ ಆಯಕ್ಷನ್ ಫಿಲ್ಮ್ ಅವಾರ್ಡ್ ನ್ನು ʼಆರ್ ಆರ್ ಆರ್ʼ ಪಡೆದುಕೊಂಡಿದೆ.
ಇನ್ನು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ʼಆರ್ ಆರ್ ಆರ್ʼ ನ ʼನಾಟು ನಾಟುʼ ಹಾಡು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಬೆಸ್ಟ್ ಸ್ಟಂಟ್ ಅವಾರ್ಡ್ ಕೂಡ ʼಆರ್ ಆರ್ ಆರ್ʼ ಪಾಲಾಗಿದೆ.
ಇದಲ್ಲದೇ ಬೆಸ್ಟ್ ಇಂಟರ್ ನ್ಯಾಷನಲ್ ಫಿಲ್ಮ್ ವಿಭಾಗದಲ್ಲಿ ʼ ಆಲ್ ಕ್ಯುಯೆಟ್ ಆನ್ ದಿ ವೆಸ್ಟರ್ನ್ ಫ್ರಂಟ್ʼ, ʼ ಅರ್ಜೆಂಟೀನಾ 1985ʼ, ʼಕ್ಲೋಸ್ʼ,ʼ ಡಿಸಿಸನ್ ಟು ಲಿವ್ʼ ಚಿತ್ರದೊಂದಿಗೆ ನಾಮಿನೇಟ್ ಆಗಿ ʼಬೆಸ್ಟ್ ಇಂಟರ್ ನ್ಯಾಷನಲ್ ಫಿಲ್ಮ್ʼ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ʼಆರ್ ಆರ್ ಆರ್ʼ ಅವಾರ್ಡ್ ಪಡೆದುಕೊಂಡಿದೆ. ಇದೇ ಕಾರ್ಯಕ್ರಮದಲ್ಲಿ ರಾಮ್ ಚರಣ್ ಪ್ರಶಸ್ತಿ ಕೊಡಲು ಆಹ್ವಾನಿತರಾಗಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ರಾಜಮೌಳಿ ಹಾಗೂ ಎಂ ಎಂ ಕೀರವಾಣಿ ಅವರು ಮಾತನಾಡಿದರು.