'ಧಮ್' ಇದ್ರೆ ಪ್ರಹ್ಲಾದ್ ಜೋಶಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ : ಬಿಜೆಪಿಗೆ ಇಬ್ರಾಹಿಂ ಸವಾಲ್

ಬೀದರ್ : 'ಧಮ್' ಇದ್ದರೆ ಪ್ರಹ್ಲಾದ್ ಜೋಶಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಬಿಜೆಪಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸವಾಲ್ ಹಾಕಿದರು. ಬೀದರ್ ನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಬ್ರಾಹ್ಮಣರ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದು ತಪ್ಪಲ್ಲ, ಧಮ್ ಇದ್ದರೆ ಪ್ರಹ್ಲಾದ್ ಜೋಶಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ. ಬಸವಕೃಪಾದವರಿಗೆ ಕೇಶವಕೃಪದಲ್ಲಿ ಜಾಗ ಇಲ್ಲ ಎಂದು ಹೇಳಿದ್ದೆ. ಯಡಿಯೂರಪ್ಪಗೆ ಮೋಸ ಮಾಡುತ್ತಾರೆ ಎಂದು 4 ವರ್ಷದ ಹಿಂದೆಯೇ ಹೇಳಿದ್ದೆ, ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಹೇಳಿದ್ದರು.ಬಿಜೆಪಿಗರು, ಕಾಂಗ್ರೆಸ್ಸಿಗರು ಮೇಕಪ್ ಹಾಕಿಕೊಂಡು ಜೆಡಿಎಸ್ ಬಳಿ ಬಂದಿದ್ದರು ಎಂದು ವಾಗ್ಧಾಳಿ ನಡೆಸಿದ್ದಾರೆ.