ಬೆಂಗಳೂರಿಗರೇ ಗಮನಿಸಿ : ಇಂದು ಮತ್ತು ನಾಳೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು : ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ( ಜ.27, ಜ 28) ವಿದ್ಯುತ್ ವ್ಯತ್ಯಯವಾಗಲಿದೆ ಎಂದುಬೆಸ್ಕಾಂ ಪ್ರಕಟಣೆ ಹೊರಡಿಸಿದೆ. ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಬೆಂಗಳೂರು ದಕ್ಷಿಣ ಭಾಗದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಇಂದು ಬೆಂಗಳೂರು ದಕ್ಷಿಣ ಭಾಗದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಸರೋಜಾ ಕಾಂಪ್ಲೆಕ್ಸ್, ರಾಜೀವನಗರ, ಪದ್ಮನಾಭನಗರ, ಯರಬ್ನಗರ, ಟಾಟಾ ಸಿಲ್ಕ್ಫಾರ್ಮ್, ಶಾಸ್ತ್ರಿನಗರ, ಎಸ್ 9 ಉಪವಿಭಾಗ ಆವರಣ, 9ನೇ ಮುಖ್ಯ ಬ್ಯಾಟಾಶೋರೂಂ. ಕಾವೇರಿ ನಗರ, ಹುಳಿಮಾವು, ಬನಗಿರಿನಗರ, ಜಯನಗರ 7ನೇ ಬ್ಲಾಕ್, ಬಿಎಸ್ಕೆ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್, ಚನ್ನಮನಕೆರೆ ಅಚ್ಚಕಾಟು, ಅಕ್ಷಯನಗರ, ಹೊಂಗಸಂದ್ರ
ಅದೇ ರೀತಿ, ಅರೆಕೆರೆ ಬಿಡಿಎ, ವಿಜಯಬ್ಯಾಂಕ್ ಲೇಔಟ್, ವಿಶ್ವಪ್ರಿಯಾ ಲೇಔಟ್ ನ್ಯಾನಪನಹಳ್ಳಿ, ಸತ್ಯಸಾಯಿ ಬಿಡಿಎ, ಬಿಟಿಎಸ್ ಲೇಔಟ್, ವಿರಾಟ್ ನಗರ, ಕಾಳೇನ ಅಗ್ರಹಾರ, ವೇಗ ನಗರ ಕೋಡಿಚಿಕ್ಕನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ದಕ್ಷಿಣ ಜಯನಗರ ಮತ್ತು ಆರ್ ಆರ್ನಗರ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.