ಚಾಮರಾಜನಗರ ಎಸ್‌ಪಿ ಕಚೇರಿ ಮುಂದೆಯೇ ವ್ಹೀಲಿಂಗ್ ಅಟ್ಟಹಾಸ, ನಿದ್ರಾವಸ್ಥೆಯಲ್ಲಿ ಪೊಲೀಸ್ ಇಲಾಖೆ

ಚಾಮರಾಜನಗರ ಎಸ್‌ಪಿ ಕಚೇರಿ ಮುಂದೆಯೇ ವ್ಹೀಲಿಂಗ್ ಅಟ್ಟಹಾಸ, ನಿದ್ರಾವಸ್ಥೆಯಲ್ಲಿ ಪೊಲೀಸ್ ಇಲಾಖೆ

ರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ವೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು ಜಾಗೃತಿಗಾಗಿ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ತಿಂಗಳ ಹಿಂದೆ ಚಾಮರಾಜನಗರ ಪೊಲೀಸರು ಪಥಸಂಚಲನ ನಡೆಸಿದ್ದು ಎಲ್ಲರಿಗೂ ತಿಳಿದೆ ಇದೆ..ಆದರೆ ಎಸ್ಪಿ ಕಚೇರಿ ಮುಂದೆಯೆ ವ್ಹೀಲಿಂಗ್ ಮಾಡೊವ್ರ ಅಟ್ಟಹಾಸಕ್ಕೆ ಜಿಲ್ಲಾ ಪೊಲೀಸರು ನಿದ್ದೆಗೆ ಜಾರಿದ್ದಾರೆ‌.

ಚಾಮರಾಜನಗರದ ಸಂತೇಮರಹಳ್ಳಿ ವೃತ್ತದ ಬಳಿ ಕಳೆದ ತಿಂಗಳು ರಾತ್ರಿ 9.ರ ರ ಸಮಯದಲ್ಲಿ 15 ವರ್ಷದ ಅನ್ಯಕೋಮಿನ ಹುಡುಗನೊಬ್ಬ ಸೈಕಲ್ ವೀಲಿಂಗ್ ಮಾಡುತ್ತಿರುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಇನ್ನೊಂದು ಸಮುದಾಯದ ಯುವಕನಿಗೆ ತಾಗಿದೆ. ಇದನ್ನು ಪ್ರಶ್ನಿಸಿದ್ದ ಯುವಕ, ಹುಡುಗನನ್ನು ಗದರಿಸಿ ಕೈಯಲ್ಲಿ ಹೊಡೆದು ಕಳಿಸಿದ್ದ. ಈ ವಿಚಾರವನ್ನು ಹುಡುಗ ತನ್ನಸಮುದಾಯವರಿಗೆ ಹೇಳಿದಾಗ ಅವರು ಗುಂಪುಗೂಡಿಕೊಂಡು ಬಂದಿದ್ದರು. ಈ ವೇಳೆ ಘರ್ಷಣೆಯಾಗಿದೆ . ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಗುಂಪನ್ನು ಚದುರಿಸಿ,ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದರು.

ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಘಟನೆಯ ಬಳಿಕ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ವಿವಿದ ಠಾಣೆಯ ಪೊಲೀಸ್ ಸಿಬ್ಬಂದಿಗಳಿಂದ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದ್ದರು.

ಪಟ್ಟಣದಲ್ಲಿ ದಿನೆ ದಿನೆ ಬೈಕಲ್ ಅಲ್ಲಿ ವ್ಹೀಲಿಂಗ್ ಮಾಡುತ್ತಿದ್ದರೂ ಪೊಲೀಸರು ಮಾತ್ರ ನಮಗೇನು ಸಂಬಂದವಿಲ್ಲ ಎಂಬಂತೆ ಇದ್ದದ್ದು ಇಂದಿನ ಸೈಕಲ್ ವ್ಹೀಲಿಂಗ್ ಇಂದ ಜನರೆ ಬುದ್ದಿ ಕಲಿಸಿದಂತಾಗಿದೆ. ಪೊಲೀಸರ ನಿಷ್ಕ್ರಿಯತೆ ಕೂಡ ಇಂತಹ ಅವಕಾಶಗಳಿಗೆ ಕಾರಣ ಕೂಡ ಆಗಿದೆ ಎಂದರೆ ತಪ್ಪಾಗಲಾರದು. ಈ ಸಂಬಂಧ ಮಾದ್ಯಮದವರೊಂದಿಗೆ ಎಸ್ಪಿ ಶಿವಕುಮಾರ್ ಅಂದು ಮಾತನಾಡಿ, ಕೇವಲ ಸೈಕಲ್ ವ್ಹೀಲಿಂಗ್ ಇಂತಹ ಘಟನೆ ಆಗಿದೆ ..ಈಗಾಗಲೇ ಇನ್ಸ್ ಪೆಕ್ಟರ್ ಗಳ ಜೊತೆಗೂಡಿ ತಂಡ ರಚಿಸಲಾಗಿದೆ. ತಂಡದ ಸಂಖ್ಯೆ ಹೆಚ್ಚಿಸಿ ಜಿಲ್ಲೆಯ ಎಲ್ಲಾ ಇನ್ಸ್ ಪೆಕ್ಟರ್ ತಂಡ ರಚಿಸಿ ವ್ಹೀಲಿಂಗ್ ಅಬಿಯಾನ ಮಾಡಿ ಸಂಪೂರ್ಣ ತಡೆಗೆ ಕ್ರಮ ವಹಿಸಲಾಗುವುದು. ಒಂದು ವಾಹನವೂ ಇಂತ ಅಪಾಯಕಾರಿ ವಾಹನ ಚಾಲನೆ ಮಾಡದಂತೆ ತಡೆಗಟ್ಟುತ್ತೇವೆ ಎಂದು ತಿಳಿಸಿದ್ದರು. *ಚಾಮರಾಜನಗರ ಜೋಡಿರಸ್ತೆಯಲ್ಲಿ ಪ್ರತಿರಾತ್ರಿ ತಿಂಗಳಿಂದಲೂ ವ್ಹೀಲಿಂಗ್ ನಡೆಯುತ್ತಿದ್ದರೂ ಇಂತಹ ವಾಹನ ಚಾಲನೆ ಮಾಡೊವ್ರ ಪತ್ತೆ ಮಾಡಿ ಕ್ರಮ ವಹಿಸಲು ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ದಂಡ ಹಾಕಲು ಸಂಚಾರಿ ಠಾಣೆಯ ಸಿಬ್ಬಂದಿಗಳು ಗುಂಪು ಗುಂಪಾಗಿ ಬಂದು ಹಿಡಿದು ದಂಡ ಹಾಕೊವ್ರು ಇಂತಹ ಕೃತ್ಯದಲ್ಲಿ ತೊಡಗುವವರ ಮೇಲೆ ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. *ಜಿಲ್ಲೆಯ ಇನ್ಸ್ ಪೆಕ್ಟರ್ ಗಳೊಡಗೂಡಿ ತಂಡ ರಚಿಸಿತ್ತೇವೆ ಎಂದಿದ್ದ ಎಸ್ಪಿ ಶಿವಕುಮಾರ್ ಅವರಿಗೆ ತಮ್ಮದೆ ಆದ ಇಲಾಖೆಯ ಸಿ.ಸಿ.ಕ್ಯಾಮೆರಾದಡಿ ಸೆರೆಯಾಗುವ ಇಂತ ದೃಶ್ಯಗಳು ಅವರ ಕಣ್ಣಿಗೆ ಕಾಣದೆ ಇರೋದು ವಿಪರ್ಯಾಸದ ಜೊತೆಗೆ ಪಟ್ಟಣದಲ್ಲಿ ಇರೊ ಸಿ.ಸಿ‌.ಕ್ಯಾಮೆರಾಗಳೆ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ವ್ಹೀಲಿಂಗ್ ಸಂಬಂದ ಸ್ಥಳೀಯರು ಎಸ್ಪಿ ಅವರಿಗರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ..ಇತ್ತ ಕೆಲ ಮಾದ್ಯಮದವರು ಐಜಿಪಿ ಮದುಕರ್ ಪವಾರ್ ಅವರಿಗೆ ತಿಳಿಸಿದರೂ ಉಪಯೋಗುತ್ತಿಲ್ಲ ಅಂದ ಮ್ಯಾಲೆ ಗಲಾಟೆ ಘರ್ಷಣೆಯಾಗಿ ಬೀದಿಗೆ ಬಂದು ನಿಂತಾಗ ಯಾವ ಪುರುಷಾರ್ಥಕ್ಕಾಗಿ ಪಥಸಂಚಲನ ಮಾಡಿ ಜಾಗೃತಿ ಮೂಡಿಸಬೇಕೆಂದುವುದು ಯಕ್ಷ ಪ್ರಶ್ನೆಯಾಗಿದೆ.