ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗಬೇಡಿ : ಆಸ್ಟ್ರೇಲಿಯಾ ಎಚ್ಚರಿಕೆ

ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗಬೇಡಿ : ಆಸ್ಟ್ರೇಲಿಯಾ ಎಚ್ಚರಿಕೆ

ಕಾನ್ಫೆರಾ, ;ಆಫ್ಘಾನಿಸ್ತಾನದಲ್ಲಿರುವ ಆಸ್ಟ್ರೇಲಿಯಾದ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗಬೇಡಿ ಎಂದು ಆಸ್ಟ್ರೇಲಿಯಾ ಸರ್ಕಾರ ಎಚ್ಚರಿಕೆ ನೀಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ ಭಯೋತ್ಪಾದಕರ ದಾಳಿ, ಬೆದರಿಕೆ ಹೆಚ್ಚಾಗಿದೆ. ಆದ್ದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಬ್ರಿಟನ್ ಹಾಗೂ ನ್ಯೂಜಿಲ್ಯಾಂಡ್‍ನ ರಾಷ್ಟ್ರದ ಸಹಕಾರದೊಂದಿಗೆ ನಿಮ್ಮನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗುವುದು ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಮರಿಸೆ ಪೇನ್ ಹೇಳಿದ್ದಾರೆ. ಕಾಬೂಲ್‍ನಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಭದ್ರತಾ ಸಮಸ್ಯೆ ಕುರಿತು ತಿಳಿಸಿದೆ. ಆದ್ದರಿಂದ ಎಚ್ಚರಿಕೆ ಇರಲಿ ಎಂದು ತಿಳಿಸಿದೆ. ಕಳೆದ ವಾರದಿಂದ 4000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪ್ರಧಾನಿ ಸಾಲ್ ಮಾರಿಸನ್ ಹೇಳಿದ್ದಾರೆ.