ಸಿದ್ದಾರ್ಥ್ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್ ಖಾನ್: ಶಾಕಿಂಗ್ ವಿಡಿಯೋ ವೈರಲ್
Salman Khan | Sidharth Shukla: ಸಲ್ಮಾನ್ ಖಾನ್ ಆ ವಿಡಿಯೋದಲ್ಲಿ ಅಂದು ತಮಾಷೆಗೆ ಹೇಳಿದ ಮಾತುಗಳು ಇಂದು ಅಕ್ಷರಶಃ ನಿಜವಾಗಿರುವುದು ದುರಂತವೇ ಸರಿ. ಈ ವಿಡಿಯೋ ಬಗ್ಗೆ ಜನರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಹಿಂದಿ ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ನಟ ಸಿದ್ದಾರ್ಥ್ ಶುಕ್ಲಾ ಅವರು ಬಿಗ್ ಬಾಸ್ ಹಿಂದಿ 13ನೇ ಸೀಸನ್ ವಿನ್ನರ್ ಆದ ಬಳಿಕ ದೇಶಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದರು. ಸೆ.2ರಂದು ಅವರ ನಿಧನದ ಸುದ್ದಿ ಕೇಳಿ ಎಲ್ಲರಿಗೂ ಶಾಕ್ ಆಯಿತು. ಮನೆಯಲ್ಲೇ ಅವರಿಗೆ ಹೃದಯಾಘಾತ ಆಯಿತು ಎಂದು ಹೇಳಲಾಗುತ್ತಿದೆಯಾದರೂ ಕೆಲವು ಅನುಮಾನಗಳು ಕೂಡ ಹುಟ್ಟಿಕೊಂಡಿವೆ. ಅದಕ್ಕೆಲ್ಲ ಮರಣೋತ್ತರ ಪರೀಕ್ಷೆಯ ವರದಿಯಲ್ಲೇ ಉತ್ತರ ಸಿಗಬೇಕಿದೆ. ಈ ನಡುವೆ ಸಿದ್ದಾರ್ಥ್ ಸಾವಿನ ಬಗ್ಗೆ ಸಲ್ಮಾನ್ ಖಾನ್ ಅವರು ವರ್ಷಗಳ ಹಿಂದೆಯೇ ನಗುನಗುತ್ತಾ ಮಾತನಾಡಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ!
ಬಿಗ್ ಬಾಸ್ ನಡೆಯುತ್ತಿದ್ದ ಸಂದರ್ಭದಲ್ಲಿ ಸಿದ್ದಾರ್ಥ್ ಶುಕ್ಲಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಂದಿತ್ತು. ಆಗ ಶೋ ನಿರೂಪಣೆ ಮಾಡುತ್ತಿದ್ದ ಸಲ್ಮಾನ್ ಖಾನ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿದ್ದರು. ಆ ಸಂದರ್ಭದಲ್ಲಿ ಸಿದ್ದಾರ್ಥ್ರ ಸಾವಿನ ಕುರಿತು ಸಲ್ಮಾನ್ ತಮಾಷೆ ಮಾಡಿದ್ದರು. ಆದರೆ ಅಂದು ಮಾಡಿದ ತಮಾಷೆ ಇಂದು ನಿಜವಾಗಿದೆ! ಆ ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಲ್ಮಾನ್ ಖಾನ್ ಆ ವಿಡಿಯೋದಲ್ಲಿ ಅಂದು ತಮಾಷೆಗೆ ಹೇಳಿದ ಮಾತುಗಳು ಇಂದು ಅಕ್ಷರಶಃ ನಿಜವಾಗಿರುವುದು ದುರಂತವೇ ಸರಿ. 'ಅಭಿಮಾನಿಗಳು ನಿಮ್ಮನ್ನು ಕಾಪಾಡಿದ್ದಾರೆ. ಆದರೆ ಮೇಲಿರುವ ದೇವರು ಕಾಪಾಡದಿದ್ದರೆ ಎಲ್ಲರೂ ಅಳುತ್ತಾರೆ. ಏನೇ ಅಂದರೂ ಒಳ್ಳೆಯ ಮನುಷ್ಯ ಆಗಿದ್ದ ಎನ್ನುತ್ತಾರೆ. ಕೂಗಾಡುತ್ತಿದ್ದ, ನೇರವಾಗಿ ಮಾತನಾಡುತ್ತಿದ್ದ. ಆದರೂ ಒಳ್ಳೆಯ ಮನಸ್ಸಿನ ವ್ಯಕ್ತಿ ಆಗಿದ್ದ ಅಂತ ಜನರು ಕಣ್ಣೀರು ಹಾಕುತ್ತಾರೆ' ಎಂದು ತಮಾಷೆಯಾಗಿ ಮಾತನಾಡುತ್ತ ಸಲ್ಮಾನ್ ಖಾನ್ ನಕ್ಕಿದ್ದರು.