5 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದ ಎತ್ತು ಒಂದೇ ವಾರಕ್ಕೆ 14 ಲಕ್ಷ ರೂಪಾಯಿಗಳಿಗೆ ಮಾರಾಟ..

5 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದ ಎತ್ತು ಒಂದೇ ವಾರಕ್ಕೆ 14 ಲಕ್ಷ ರೂಪಾಯಿಗಳಿಗೆ ಮಾರಾಟ..

ಭೂಮಿಯ ಮೇಲೆ ಹೂಡಿಕೆ ಮಾಡಿದ ಸಂದರ್ಭದಲ್ಲಿ ಕೆಲವೊಮ್ಮೆ ವಾರ ಅಥವಾ ತಿಂಗಳ ಅವಧಿಯಲ್ಲಿ ಮತ್ತಷ್ಟು ಹೆಚ್ಚಿನ ಹಣ ತಂದು ಕೊಡುವುದು ಉಂಟು. ಆದರೆ ರೈತನ ಮಿತ್ರ ಎಂದೇ ಕರೆಯಲ್ಪಡುವ ಎತ್ತು ಸಹ ಈಗ ಖರೀದಿಸಿದ ರೈತರೊಬ್ಬರಿಗೆ ಒಂದೇ ವಾರಕ್ಕೆ ಭಾರಿ ಲಾಭ ತಂದು ಕೊಟ್ಟಿದೆ.

ಹೌದು, ಇಂತಹದೊಂದು ಅಚ್ಚರಿಯ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಟಗುಡ್ಡ ಹಲಕಿ ಗ್ರಾಮದಲ್ಲಿ ನಡೆದಿದ್ದು, ಇಲ್ಲಿನ ರೈತ ಸಹೋದರರಾದ ಕಾಶಿಲಿಂಗಪ್ಪ ಗಡದಾರ ಹಾಗೂ ಯಮನಪ್ಪ ಗಡದಾರ ವಾರದ ಹಿಂದೆ ಒಂದು ಎತ್ತನ್ನು 5 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿ ತಂದಿದ್ದರು.

ಆದರೆ ಕೇವಲ ಒಂದೇ ವಾರದೊಳಗೆ ಇದೆ ಎತ್ತನ್ನು ನಂದಗಾಂವ್ ಗ್ರಾಮದ ವಿಠ್ಠಲ ಎಂಬವರು ಬರೋಬ್ಬರಿ 14 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದಾರೆ. ಈ ಹಿಂದೆ ಹಲವು ಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈ ಎತ್ತು ಈವರೆಗೆ 6 ಬೈಕ್, 50 ಗ್ರಾಂ ಚಿನ್ನ ಗಳಿಸಿದೆ ಎನ್ನಲಾಗಿದ್ದು, ಹೀಗಾಗಿ ಇಷ್ಟೊಂದು ಬೆಲೆಗೆ ಮಾರಾಟವಾಗಿದೆ ಎನ್ನಲಾಗಿದೆ.