ನಟನೆ ಬಿಟ್ಟು ಹೆಣ್ಮಕ್ಕಳ ದಂಧೆಗಿಳಿದ ಕನ್ನಡದ ನಟ ಅರೆಸ್ಟ್
ನಟನೆ ಬಿಟ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಶುರು ಮಾಡಿದ ಸ್ಯಾಂಡಲ್ವುಡ್ ನಟ ಈಗ ಅರೆಸ್ಟ್ ಆಗಿದ್ದಾರೆ. ಲೊಕ್ಯಾಂಟೋ ಆ್ಯಪ್ ನ ಹಿಂದೆ ಬಿದ್ದ ನಟ ಸಂಜು ಅಲಿಯಾಸ್ ಮಂಜುನಾಥ್ ಹೆಣ್ಣು ಮಕ್ಕಳ ಫೊಟೋ ಬಳಸಿ ನಕಲಿ ಪ್ರೊಫೈಲ್ ಬಳಸಿ ಗ್ರಾಹಕರನ್ನ ಸೆಳೆದು ಸುಲಿಗೆ ಮಾಡುವುದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದರು. ಈತ 'ನ್ಯೂರಾನ್' ಎಂಬ ಸೈಕೋಲಾಜಿ ಚಿತ್ರದಲ್ಲಿ ನಾಯಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಪಡೆದಿದ್ದ. ಆದರೀಗ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.