ನವೀಕರಿಸಬಹುದಾದ ಇಂಧನ ನೀತಿಗೆ 'ಸಚಿವ ಸಂಪುಟ' ಸಭೆ ಅಸ್ತು : ಸಚಿವ ಮಾಧುಸ್ವಾಮಿ

ನವೀಕರಿಸಬಹುದಾದ ಇಂಧನ ನೀತಿಗೆ 'ಸಚಿವ ಸಂಪುಟ' ಸಭೆ ಅಸ್ತು : ಸಚಿವ ಮಾಧುಸ್ವಾಮಿ

ಬೆಂಗಳೂರು : ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2027 ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ( Cabinet Meeting) ಅನುಮೋದನೆ ನೀಡಿದೆ.

ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ( Karnataka Cabinet Meeting ) ನಡೆಯಿತು.

ಈ ಸಭೆಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ( SC, ST Reservation Hike ) ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಸೇರಿದಂತೆ ಹಲವು ನಿರ್ಣಯಗಳಿಗೆ ಅಂಗೀಕಾರ ದೊರೆತಿದೆ.

ಸಂಪುಟ ಸಭೆಯ ಬಳಿಕ, ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸಂಪುಟ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯಕ್ಕೆ ಅನ್ವಯಿಸುವಂತೆ ಹೆಚ್ಚು ರೆಜ್ಯುಲೆಷನ್ ಉಪಗ್ರಹ ದತ್ತಾಂಶ ಖರೀದಿಗೆ 18 ಕೋಟಿ ಅನುಮೋದನೆ ಕೊಡುತ್ತಿದ್ದೇವೆ. ಕರ್ನಾಟಕ ನವೀಕರಣ ಮಾಡಬಹುದಾದ ಇಂಧನ ನೀತಿ 2022 ರಿಂದ 27ಕ್ಕೆ ತಿದ್ದುಪಡಿ ಮಾಡಿದ್ದೇವೆ ಎಂದರು.. ಹೊಸದಾಗಿ ಸೋಲಾರ್ ಘಟಕ ಸ್ಥಾಪಿಸಲು ಈಗಿರುವ 3.5 ಎಕರೆ ಜಮೀನಿನ ಮಿತಿಯನ್ನು 4 ಎಕರೆಗೆ ವಿಸ್ತರಿಸಲಾಗಿದೆ ಎಂದರು.

ದಾವಣಗೆರೆ ಹೊನ್ನಾಳಿಯಲ್ಲಿ 100 ರಿಂದ200 ಬೆಡ್ ಆಸ್ಪತ್ರೆಗೆ 23 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ. ಗೋವಿಂದರಾಜ ನಗರ ಕ್ಷೇತ್ರದ ಹೈಟೇಕ್ ಆಸ್ಪತ್ರೆಗೆ 24 ಕೋಟಿ ಬಿಡುಗಡೆ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರ ಹಾಗೂ ನೆಲಮಂಗಲ ರೋಡ್ ನವೀಕರಣಕ್ಕೆ 8 ಕೋಟಿ ಇದ್ದ 10 ಕೋಟಿ 13 ಲಕ್ಷ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದರು.