ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ: ವೇತನ ಹೆಚ್ಚಳ, ಸೇವಾ ಭದ್ರತೆಗೆ ಸಿಎಂ ಬೊಮ್ಮಾಯಿ ಭರವಸೆ
ಬೆಂಗಳೂರು: ಕಳೆದ ಐದು ದಿನಗಳಿಂದ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದಾರೆ. ಈ ನೌಕರರಿಗೆ ಸಂಬಂಧಸಿದಂತೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವಂತ ಶ್ರೀನಿವಾಸಚಾರಿ ವರದಿಯ ಶಿಫಾರಸ್ಸುಗಳಲ್ಲಿ ವೇತನ ಹೆಚ್ಚಳ ಹಾಗೂ 60 ವರ್ಷದವರೆಗೆ ಸೇವಾ ಭದ್ರತೆಯನ್ನು ಒದಗಿಸುವಂತ ಬೇಡಿಕೆ ಈಡೇರಿಸೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಈ ಕುರಿತಂತೆ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘವು ಮಾಹಿತಿ ನೀಡಿದ್ದು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ KSHCOEA ಸಂಘವು ಹಲವಾರು ವರ್ಷಗಳಿಂದ, ಹಲವು ಹಂತಗಳಲ್ಲಿ ಹೋರಾಟದ ಫಲವಾಗಿ ಅಂದಿನ ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಶ್ರೀನಿವಾಸಚಾರಿ, MLC ಆಯನೂರು ಮಂಜುನಾಥ್ ಹಾಗೂ ಎರಡು ಇಲಾಖೆ ಅಧಿಕಾರಿಗಳು ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಿ ಸಮಿತಿಯು ದಿನಾಂಕ 28.12.2020 ಕೆ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದಿದೆ.
ಫೆ.06ರಿಂದ ಮಾಡು ಇಲ್ಲವೇ ಮಡಿ KSHCOEA ಅನಿರ್ಧಿಷ್ಠಾವಧಿ ಮುಷ್ಕರ ಯಶಸ್ವಿಯಾಗಿ ಫ್ರೀಡಂ ಪಾರ್ಕಿನಲ್ಲಿ ಮುನ್ನಡೆಯುತ್ತಿದೆ. ಈ ಹೋರಾಟ 05ನೆಯ ದಿನಕ್ಕೆ ಕಾಲಿಟ್ಟ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಮುಷ್ಕರ. ಭರವಸೆ ನೋಡಿ ನೋಡಿ ಸಾಕಾಗಿದೆ, ಆದೇಶ ನೀಡಲು ನೌಕರರ ಬಿಗಿ ಪಟ್ಟು. ಭಾರತೀಯ ಮಜ್ದೂರ್ ಸಂಘದ ರಾಜ್ಯ ಸಮಿತಿಯು ನಿಯೋಗವು ದಿನಾಂಕ 09.02.2023 ರಾತ್ರಿ 8.30ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಸಭೆ ಮಾಡಲಾಯಿತು ಎಂದು ಸಂಘದ (KSHCOEA) ರಾಜ್ಯಾಧ್ಯಕ್ಷರಾದ ವಿಶ್ವರಾಧ್ಯ ಎಚ್. ಯಮೋಜಿ ರವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಫೆಬ್ರವರಿ 06 ರ ಪ್ರತಿಭಟನೆಯಲ್ಲಿ ನೀಡಿದ ಮನವಿಯ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಯಿತು. ಮುಖ್ಯಮಂತ್ರಿಗಳು ವಿಶೇಷವಾಗಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಈಡೇರಿಸುವುದಾಗಿ ನಿಶ್ಚಿತವಾದ ಭರವಸೆಯನ್ನು ನೀಡಿರುತ್ತಾರೆ. ಈ ಸಭೆಯಲ್ಲಿ ಪ್ರಮುಖವಾಗಿ ಖಾಯಂಯಾತಿ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನದ ಬಗ್ಗೆ ಪ್ರಸ್ತಾಪಿಸಲಾಯಿತು.
ಪ್ರಮುಖ ಎರಡು ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಥಮ ಆದ್ಯತೆಯಾಗಿ ವೇತನ ಹೆಚ್ಚಳವನ್ನು ವರದಿ ಆಧಾರದ ಮೇಲೆ ಆದೇಶ ನೀಡಿ ನಂತರ ಹಂತ ಹಂತವಾಗಿ ಸಮಾನ ವೇತನ ಹೆಚ್ಚಳ ಮಾಡಿ ಕೊಡುವುದಾಗಿ ಬರವಸೆ ನೀಡಿರುತ್ತಾರೆ.
ಎರಡನೆಯದಾಗಿ ಖಾಯಂಯಾತಿ ಬಗ್ಗೆ ಪ್ರಸ್ತಾಪಿಸಿದಾಗ ಮುಖ್ಯ ಮಂತ್ರಿಗಳು ಸಧ್ಯಕ್ಕೆ ಇದು ಅಸಾಧ್ಯ ಎಂದು ತಿಳಿಸಿದಾಗ, ಇದಕ್ಕೆ ಒಪ್ಪದ ಸಂಘಟನೆ ಕೊನೆ ಪಕ್ಷ ಅಸ್ಸಾಂ ಮಾದರಿ ಇತರೇ ಯಾವುದೇ ಮಾದರಿಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳಗಳ ವಿವೇಚನೆಯಲ್ಲಿ 60 ವರ್ಷದ ವರೆಗೆ ಸೇವಾ ಭದ್ರತೆ ನೀಡುವುದಾಗಿ ಸ್ಪಷ್ಟ ಭರವಸೆ ನೀಡಿರುತ್ತಾರೆ.
ಈ ಬಗ್ಗೆ ಹಾಗೂ ಮುಷ್ಕರ ಮುಂದುವರೆಸುವ ಬಗ್ಗೆ ದಿನಾಂಕ 09.09.2023ರಂದು ತಡರಾತ್ರಿ 11.30ಕ್ಕೆ ರಾಜ್ಯ ಸಮಿತಿ ನಿರ್ಣಯಿಸಿದೆ. ಸರ್ಕಾರದಿಂದ, ಸಚಿವರಿಂದ ಮತ್ತು ಇಲಾಖೆ ಅಧಿಕಾರಿಗಳ ಹಂತದಲ್ಲಿ ನೀಡಬಹುದಾದ ಆದೇಶಗಳನ್ನು ಅಪೇಕ್ಷಿಸಲಾಗಿದೆ. ಪ್ರಮುಖ ಬೇಡಿಕೆಗಳ ಆದೇಶಗಳು ಕೈ-ಸೇರಿದ ತಕ್ಷಣ ಮುಷ್ಕರವನ್ನು ಹಿಂಪಡೆಯಲಾಗುವುದು. ಅಲ್ಲಿವರೆಗೂ ಯಥಾಸ್ಥಿತಿ ಮುಷ್ಕರವೂ ಮುಂದುವರೆಯುತ್ತದೆ. ಕೇವಲ ಭರವಸೆ ಮಾತುಗಳಿಗೆ KSHCOEA ಸಂಘವು ಮಣೆಯುವುದಿಲ್ಲವೆಂದು ಎನ್ನುವ ವಿಷಯವನ್ನು ತಿಳಿಸಿದ್ದಾರೆ.
ಮುಖ್ಯ ಮಂತ್ರಿಗಳ ಸಭೆಯ ಭೇಟಿಯಲ್ಲಿ KSHCOEA ಸಂಘದವತಿಯಿಂದ ರಾಜ್ಯಾಧ್ಯಕ್ಷರಾದ ವಿಶ್ವಾರಾಧ್ಯ ಹೆಚ್. ಯಮೋಜಿ, ರಾಜ್ಯ ಮಾಧ್ಯಮ ಕಾರ್ಯದರ್ಶಿಗಳಾದ ಗಿರೀಶ್ K, ರಾಜ್ಯ ಸಂಘಟನಾ ಕಾರ್ಯದರ್ಶಿ ಗವಿಸಿದ್ದಪ್ಪ ಡಿ. ಉಪ್ಪಾರ, ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಡಾ. ಮಹೀಂದ್ರ, ರಾಷ್ಟ್ರೀಯ ಕಾರ್ಯ ಸಮಿತಿಯ ಸದಸ್ಯರಾದ ಆಶಾ ಯಡಹಳ್ಳಿ ಹಾಗೂ ರಾಜ್ಯ ಸಮಿತಿಯ ಸದಸ್ಯರಾದ ಶಶಿಕಲಾ ಹಾಜರಿದ್ದರು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ