ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ: 21 ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಟ್ಟ ಪ್ರಧಾನಿ ಮೋದಿ

ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಮತ್ತು ಸುಬೇದಾರ್ ಮೇಜರ್ ಯೋಗೇಂದ್ರ ಸಿಂಗ್ ಯಾದವ್ (ನಿವೃತ್ತ) ಸೇರಿದಂತೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಈ ದ್ವೀಪಗಳಿಗೆ ಇಡಲಾಗಿದೆ. ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಹೊಸ ಹೆಸರುಗಳನ್ನು ಪಡೆದಿರುವ 21 ದ್ವೀಪಗಳ ಹೆಸರುಗಳಲ್ಲಿ ಹಲವು ಸಂದೇಶಗಳು ಅಡಕವಾಗಿವೆ. ಏಕ್ ಭಾರತ್, ಶ್ರೇಷ್ಠ ಭಾರತ್; ಈ ಸಂದೇಶ ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಬಿಂಬಿಸುತ್ತದೆ ಎಂದರು. ವೀರ ಸಾವರ್ಕರ್ ಮತ್ತು ದೇಶಕ್ಕಾಗಿ ಹೋರಾಡಿದ ಅನೇಕ ವೀರರು ಅಂಡಮಾನ್ನ ಈ ನೆಲದಲ್ಲಿ ಬಂಧಿತರಾಗಿದ್ದರು.
ನಾನು 4-5 ವರ್ಷಗಳ ಹಿಂದೆ ಪೋರ್ಟ್ ಬ್ಲೇರ್ಗೆ ಭೇಟಿ ನೀಡಿದಾಗ ಅಲ್ಲಿನ 3 ಪ್ರಮುಖ ದ್ವೀಪಗಳಿಗೆ ಭಾರತೀಯ ಹೆಸರುಗಳನ್ನು ಇಟ್ಟು ಬಂದಿದ್ದೆ ಎಂದರು. ತ್ರಿವರ್ಣ ಧ್ವಜ ಹಾರಿಸಿದ ನಾಡು: ಅಂಡಮಾನ್ನ ಈ ನಾಡು ಮೊಟ್ಟಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ನಾಡು. ಅಲ್ಲಿ ಮೊದಲ ಬಾರಿಗೆ ಸ್ವತಂತ್ರ ಭಾರತದ ಸರ್ಕಾರ ರಚನೆಯಾಯಿತು. ಇಂದು ನೇತಾಜಿ ಸುಭಾಷ್ ಬೋಸ್ ಅವರ ಜನ್ಮದಿನ.
ದೇಶವು ಈ ದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸುತ್ತದೆ ಎಂದರು.