ಮಂಡ್ಯ ಸಂಸದೆ ʻಸುಮಲತಾ ಎದುರೇ ಹೈಡ್ರಾಮಾʼ : ಕೈಕೈ ವಿಲಾಯಿಸಿದ ʻದಳʼ- ʼಕೈʼ ಕಾರ್ಯಕರ್ತರು

ಮಂಡ್ಯ ಸಂಸದೆ ʻಸುಮಲತಾ ಎದುರೇ ಹೈಡ್ರಾಮಾʼ : ಕೈಕೈ ವಿಲಾಯಿಸಿದ ʻದಳʼ- ʼಕೈʼ ಕಾರ್ಯಕರ್ತರು

ಮಂಡ್ಯ : ಜಿಲ್ಲೆಯ ಪ್ರಸಿದ್ಧ ಮಹದೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ವೇದಿಕೆಗೆ ಆಗಮಿಸುತ್ತಿದ್ದಂತೆ ಭಾರೀ ಹೈಡ್ರಾಮಾ ಸೃಷ್ಟಿಯಾಗಿದೆ. ಬಳಿಕ ಕೈಕೈ ವಿಲಾಯಿಸಿಕೊಂಡು ʻದಳʼ, ʼಕೈʼ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.ಮಹದೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಮಂಡ್ಯ ಸಂಸದೆ ಸುಮಲತಾ ವೇದಿಕೆಯಲ್ಲಿ ಏರುವ ವಿಚಾರಕ್ಕೆ ಪರಸ್ಪರ ಜೆಡಿಎಸ್‌- ಕಾಂಗ್ರೆಸ್‌ ನಾಯಕರು ನಡುವೆ ವಾಗ್ದಾದ ತೀವ್ರಗೊಂಡು ಕೈ ಕೈ ವಿಲಾಯಿಸಿ ಗಲಾಟೆ ನಡೆಸಿದ್ದಾರೆ. ಗಲಾಟೆ ಕಂಡು ಮಂಡ್ಯ ಸಂಸದೆ ಸುಮಲತಾ ವೇಧಿಕೆಯಿಂದ ಹೊರ ನಡೆದ ಘಟನೆ ಬೆಳಕಿಗೆ ಬಂದಿದೆ. ಇದೀಗ ಬಂದ ಸುದ್ದಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.