534 ದಿನಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣ

534 ದಿನಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣ

ನವದೆಹಲಿ: ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 8,488 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 249 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.ಇದೇ ಅವಧಿಯಲ್ಲಿ 12,510 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ ಎಂಬುದು ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದ ತಿಳಿದುಬಂದಿದೆ.ಇದರೊಂದಿಗೆ ಈವರೆಗೆ 3,39,34,547 ಮಂದಿ ಸೋಂಕಿನಿಂದ ಚೇತರಿಸಿಕೊಂಡಂತಾಗಿದೆ.ಸದ್ಯ ದೇಶದಲ್ಲಿ 1,18,443 ಸಕ್ರಿಯ ಪ್ರಕರಣಗಳಿದ್ದು, ಇದು 534 ದಿನಗಳಲ್ಲೇ ಅತಿ ಕಡಿಮೆ ಆಗಿದೆ. ಚೇತರಿಕೆ ದರ ಶೇ 98.31 ಇದ್ದು, ಇದು 2020ರ ಮಾರ್ಚ್‌ ನಂತರ ಅತಿಹೆಚ್ಚಿನದ್ದಾಗಿದೆ.