ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆಯೇ ತನ್ನೆಲ್ಲ ಆಂತರಿಕ ಬಂಡಾಯ ಶಮನಕ್ಕೆ ಬಿಜೆಪಿ ಮುಂದಾಗಿದ್ದು, “ಭಿನ್ನ ಧ್ವನಿ’ಗಳ ಶಮನಕ್ಕೆ ವರಿಷ್ಠರೇ ಅಖಾಡಕ್ಕೆ ಇಳಿದಿದ್ದಾರೆ.

ಚುನಾವಣ ದೃಷ್ಟಿಯಿಂದ ಬಿಜೆಪಿಗೆ ಮೂರು ವಿಷಯಗಳು ಹಿನ್ನಡೆಯಾಗಬಹುದು ಎಂದು ವ್ಯಾಖ್ಯಾನಿಸಲಾಗಿತ್ತು.

ಚುನಾವಣ ದೃಷ್ಟಿಯಿಂದ ಬಿಜೆಪಿಗೆ ಮೂರು ವಿಷಯಗಳು ಹಿನ್ನಡೆಯಾಗಬಹುದು ಎಂದು ವ್ಯಾಖ್ಯಾನಿಸಲಾಗಿತ್ತು. ಪಂಚಮಸಾಲಿ ಮೀಸಲು ಹೋರಾಟದ ಜತೆಗೆ ಪಕ್ಷದ ರಾಜ್ಯ ನಾಯಕರ ವಿರುದ್ಧವೇ ತಿರುಗಿ ಬಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಒಂದೆಡೆಯಾದರೆ, ಪಕ್ಷದ ವೇದಿಕೆಯಲ್ಲಿ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂದು ಮುನಿಸಿಕೊಂಡ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಬೇಸರ ಇನ್ನೊಂದೆಡೆ. ಇದಲ್ಲದೇ ಸಚಿವ ಶ್ರೀರಾಮುಲು ಅವರ ನಡೆ ಬಿಜೆಪಿಗೆ ತೀವ್ರ ಮುಜು ಗರವನ್ನುಂಟು ಮಾಡಿತ್ತು. ಇದೀಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಇದಕ್ಕೆ ಪರಿಹಾರ ಹುಡುಕುವ ಹೊಣೆ ಹೊತ್ತಿದ್ದಾರೆ ಎಂದು ತಿಳಿದು ಬಂದಿದೆ.

ಜ.27 ಹಾಗೂ 28ರಂದು ನಡೆಯುವ ರಾಜ್ಯ ಪ್ರವಾಸ ಸಂದರ್ಭದಲ್ಲಿ ಎಲ್ಲ ಅಸಮಾಧಾನಗಳಿಗೆ ತೆರೆ ಬೀಳುವ ಸಂಭವವಿದೆ. ಈ ಸಂಬಂಧ ಬೆಳಗಾವಿಯಲ್ಲಿ ರಾಜ್ಯದ ಹಿರಿಯ ನಾಯಕರ ಜತೆಗೆ ಶಾ ಸಂವಾದ ನಡೆಸುವರು. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಭಾಗವಹಿಸುವರು. ಇದೇ ಸಭೆಯಲ್ಲಿ ಭಾಗವಹಿಸುವಂತೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೂ ಸೂಚಿಸಲಾಗಿದೆ ಎಂದು ಹೇಳಲಾಗಿದೆ.

ಯತ್ನಾಳ್‌ಗೆ ಖಡಕ್‌ ಸೂಚನೆ?
ಮೂಲಗಳ ಪ್ರಕಾರ ಖುದ್ದು ಅಮಿತ್‌ ಶಾ ಅವರೇ ಯತ್ನಾಳ್‌ ಅವರಿಗೆ ಕರೆ ಮಾಡಿ ಪಕ್ಷ ಹಾಗೂ ಯಡಿಯೂರಪ್ಪ ವಿರುದ್ಧ ಮಾತನಾಡಬಾರದು. ಪಂಚಮಸಾಲಿ ಮೀಸಲು ಹೋರಾಟದಲ್ಲೂ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ ಎಂದು ಖಡಕ್‌ ಸೂಚನೆ ನೀಡುವ ಜತೆಗೆ ರಾಜ್ಯ ಪ್ರವಾಸದಲ್ಲಿ ಪಾಲ್ಗೊಂಡು ಪಕ್ಷ ಸಂಘಟನೆಯಲ್ಲಿ ಭಾಗಿಯಾಗುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯತ್ನಾಳ್‌ ಪಕ್ಷ ಹಾಗೂ ಯಡಿಯೂರಪ್ಪ ವಿರುದ್ಧ ಯಾವುದೇ ಹೇಳಿಕೆ ನೀಡದಿರಲು ನಿರ್ಧರಿಸಿದ್ದಾರೆ.

ಇನ್ನೊಂದೆಡೆ ಮಾಜಿ ಸಿಎಂ ಯಡಿಯೂರಪ್ಪ ಜತೆಯೂ ಪಕ್ಷದ ವರಿಷ್ಠರು ದೂರವಾಣಿ ಮೂಲಕ ಮಾತನಾಡಿದ್ದು, ಸಣ್ಣಪುಟ್ಟ ವಿಷಯಗಳಿಗೆ ಮುನಿಸು ಬೇಡ. ತಾವೇ ಮುಂದೆ ನಿಂತು ಪಕ್ಷ ಬಲವರ್ಧನೆಗೆ ಮಾರ್ಗದರ್ಶನ ಮಾಡಿ ಎಂದು ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಜತೆಗೆ ಫೆಬ್ರವರಿ ತಿಂಗಳಲ್ಲಿ ರಾಜ್ಯದ 4 ಭಾಗಗಳಿಂದ ಪ್ರಾರಂಭವಾಗುವ ರಥಯಾತ್ರೆಯಲ್ಲಿ ಯಡಿಯೂರಪ್ಪ ಭಾಗಿಯಾಗುವರು. ಇನ್ನೊಂದೆಡೆ ಜನಾರ್ದನ ರೆಡ್ಡಿ ಪಕ್ಷ ತ್ಯಾಗದ ಹಿನ್ನೆಲೆಯಲ್ಲಿ ನೇಪಥ್ಯಕ್ಕೆ ಸರಿದಿದ್ದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೂ ಖಡಕ್‌ ಸೂಚನೆ ರವಾನಿಸಲಾಗಿದ್ದು, ಎಲ್ಲ ಭಿನ್ನ ಧ್ವನಿಗಳನ್ನೂ ಶಮನ ಮಾಡುವ ಕಾರ್ಯಾಚರಣೆ ಆರಂಭವಾಗಿದೆ.

ವಿಜಯೇಂದ್ರಗೆ ಟಿಕೆಟ್‌ ಭರವಸೆ?
ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ನೀಡುವುದು ಹಾಗೂ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವ ವಿಷಯ ದಲ್ಲಿ ಮಾತ್ರ ಯಡಿಯೂರಪ್ಪ ಅವರು ವರಿಷ್ಠರಿಂದ ಭರವಸೆಯ ನಿರೀಕ್ಷೆಯಲ್ಲಿದ್ದರು. ಅದಕ್ಕೆ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಜಯೇಂದ್ರ ಅವರಿಗೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಗುವುದು ಬಹುತೇಕ ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಎಲ್ಲದಕ್ಕೂ ಗುರ್‌ಗುಡಲಾಗದು. ಹೀಗಾ ಗಿ ಬಿಎಸ್‌ವೈ ವಿರುದ್ಧ ರಾಜಕೀಯ ಸಂಘ ರ್ಷಕ್ಕೆ ತೆರೆ ಎಳೆದಿದ್ದೇನೆ. ಅವರ ಬಗ್ಗೆ ನನಗೆ ಗೌರವ ವಿದೆ. ಇದು ರಾಜಕೀಯ ಹೊಂದಾಣಿಕೆ ಅಲ್ಲ. ಸಣ್ಣತನದ ವ್ಯಕ್ತಿತ್ವ ಇರುವವರ ಬಗ್ಗೆ ಮಾತನಾಡ ದಂತೆ ವರಿಷ್ಠರು ಹೇಳಿದ್ದನ್ನು ಕೇಳಲೇಬೇಕು.
- ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ಶಾಸಕ