IND vs NZ 3rd T20I: ಇಂದು ಭಾರತ-ನ್ಯೂಜಿಲೆಂಡ್ ಮೂರನೇ ಟಿ20

IND vs NZ 3rd T20I: ಇಂದು ಭಾರತ-ನ್ಯೂಜಿಲೆಂಡ್ ಮೂರನೇ ಟಿ20

ಭಾರತ & ನ್ಯೂಜಿಲೆಂಡ್‌‌‌‌‌‌ ನಡುವಣ ಮೂರನೇ ಟಿ20 ಇಂದು (ನ.22) ನೆಪಯರ್​ನ ಮಕ್ಲೆನ್ ಪಾರ್ಕ್​​ನಲ್ಲಿ ನಡೆಯಲಿದ್ದು, ಸಾಕಷ್ಟು ಕುತೂಹಕ ಕೆರಳಿಸಿದೆ. ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ನ್ಯೂಜಿಲೆಂಡ್‌‌ ಗೆದ್ದಲ್ಲಿ ಸರಣಿ ಸಮಬಲವಾಗಲಿದೆ. ಒಂದುವೇಳೆ ಮಳೆ ಬಂದು ಪಂದ್ಯ ರದ್ದಾದರೂ ಹಾರ್ದಿಕ್‌ ಪಾಂಡ್ಯ ಪಡೆಗೆ ಟ್ರೋಫಿ ಒಲಿಯಲಿದೆ. ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 65 ರನ್​ಗಳ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿದೆ.