ವಾಟ್ಸಾಪ್ ಡಿಪಿಯಲ್ಲಿ ಈಶ್ವರ ದೇವರ ಚಿತ್ರ ಹಾಕಿದ್ದ ಉಗ್ರ ಶಾರಿಕ್

ಮೈಸೂರು: ಉಗ್ರ ಶಾರಿಕ್ ವಾಟ್ಸಾಪ್ ಡಿಪಿಯಲ್ಲಿ ಈಶ್ವರ ದೇವರ ಚಿತ್ರವನ್ನು ಹಾಕಿದ್ದ ವಿಚಾರ ಬೆಳಕಿಗೆ ಬಂದಿದೆ. ನಕಲಿ ಆಧಾರ್ ವಿಳಾಸ ನೀಡಿದ್ದ ಶಾರಿಕ್, ಅನುಮಾನ ಬಾರದೇ ಇರಲು ವಾಟ್ಸಾಪ್‌ನಲ್ಲಿ ಹಿಂದೂ ದೇವರ ಚಿತ್ರ ಹಾಕಿದ್ದ. ಆತ ಧಾರವಾಡ ಶೈಲಿ ಕನ್ನಡವನ್ನೇ ಮಾತನಾಡುತ್ತಿದ್ದ. ವೇಷ ಭೂಷಣವಾಗಲಿ, ಬಟ್ಟೆಯಾಗಲಿ ಯಾವುದರಲ್ಲೂ ಅವನು ಮುಸ್ಲಿಂ ವ್ಯಕ್ತಿ ಎಂಬ ಅನುಮಾನವೇ ಬಂದಿರಲಿಲ್ಲ ಎಂದು ಶಾರಿಕ್ ತರಬೇತಿ ಪಡೆಯುತ್ತಿದ್ದ ಮೊಬೈಲ್ ರಿಪೇರಿ ಕೇಂದ್ರದ ಮುಖ್ಯಸ್ಥ ಪ್ರಸಾದ್ ಹೇಳಿದ್ದಾರೆ.