ನಯನತಾರಾಗೆ ಕೊಟ್ಟಿದ್ದ ಆಫರ್ ಬಾಚಿಕೊಂಡ ಸ್ಯಾಂಡಲ್ವುಡ್ ನಟಿ; ಕಾಲಿವುಡ್ನಲ್ಲಿ ಹೆಚ್ಚಾಯ್ತು ಕನ್ನಡ ಮಂದಿಯ ಹವಾ

ತಮಿಳು, ತೆಲುಗು ಹಾಗೂ ಬಾಲಿವುಡ್ನಲ್ಲಿ ಕನ್ನಡದ ಸಾಕಷ್ಟು ನಟಿಯರು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ನಯನತಾರಾ ಶೀಘ್ರವೇ ವಿವಾಹವಾಗುತ್ತಿದ್ದಾರೆ. ಈ ಕಾರಣಕ್ಕೆ ಅವರು ಬಂದ ಆಫರ್ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಒಪ್ಪಿಕೊಂಡ ಕೆಲ ಸಿನಿಮಾಗಳಿದ್ದು, ಅದರ ಶೂಟಿಂಗ್ ಮುಗಿಸಲೇಬೇಕಿದೆ. ಶಾರುಖ್ ಖಾನ್ ಹಾಗೂ ನಿರ್ದೇಶಕ ಅಟ್ಲೀ ಸಿನಿಮಾದಿಂದ ನಯನತಾರಾ ಹೊರ ನಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಈ ಸಿನಿಮಾದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಈ ಸಿನಿಮಾ ಬದಲಿಗೆ ಯುವರಾಜ್ ಧಯಲಾನ್ ನಿರ್ದೇಶನದ ತಮಿಳು ಸಿನಿಮಾದಿಂದ ಅವರು ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.
ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ ಕೇಸ್ನಲ್ಲಿ ಸಿಕ್ಕಿ ಬಿದ್ದಿದ್ದರು. ಹೀಗಾಗಿ, ಶಾರುಖ್ ಸಿನಿಮಾ ಕೆಲಸಗಳು ವಿಳಂಬವಾಗಿದೆ. ನಯನತಾರಾ ಇಲ್ಲದೆ ಇರುವ ದೃಶ್ಯಗಳ ಚಿತ್ರೀಕರಣವನ್ನು ಯುವರಾಜ್ ಮಾಡಿ ಮುಗಿಸಿದ್ದಾರೆ. ಅಟ್ಲೀ ಚಿತ್ರದ ಕೆಲಸಗಳನ್ನು ಮುಗಿಸಿ ನಯನತಾರಾ ಇತ್ತ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಶಾರುಖ್ ಸಿನಿಮಾ ಕೆಲಸಗಳು ವಿಳಂಬವಾಗುತ್ತಿರುವುದರಿಂದ ಅವರಿಗೆ ಡೇಟ್ ಹೊಂದಿಸೋದು ಕಷ್ಟವಾಗುತ್ತಿದೆ. ಹೀಗಾಗಿ, ಅವರು ಯುವರಾಜ್ ನಿರ್ದೇಶನದ ಚಿತ್ರದಿಂದ ಹೊರ ಬಂದಿದ್ದಾರೆ.
ನಯನತಾರಾ ಬದಲಿಗೆ ಶ್ರದ್ಧಾ ಅವರನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಿನಿಮಾ ನಿರ್ಮಾಪಕ ಎಸ್.ಆರ್. ಪ್ರಭು ಅವರು ಖಚಿತಪಡಿಸಿದ್ದಾರೆ. ಈ ವಿಚಾರ ಕೇಳಿ ಶ್ರದ್ಧಾ ಅಭಿಮಾನಿಗಳ ಖುಷಿ ಹೆಚ್ಚಿದೆ. ಕನ್ನಡದ ಯು-ಟರ್ನ್ ಸಿನಿಮಾ ಶ್ರದ್ಧಾಗೆ ಖ್ಯಾತಿ ತಂದು ಕೊಟ್ಟಿತು. ಈ ಸಿನಿಮಾ ತೆರೆಕಂಡ ನಂತರ ಸಾಕಷ್ಟು ಆಫರ್ಗಳು ಅವರಿಗೆ ಬಂದವು.