ಬಾಯ್ಕಾಟ್ ಟ್ರೆಂಡ್ ನಡುವೆಯೂ ರಣಬೀರ್ ಚಿತ್ರ 'ಬ್ರಹ್ಮಾಸ್ತ್ರ' ಮೊದಲ ದಿನ ಗಳಿಸಿದ್ದೆಷ್ಟು?

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ' ಸೆಪ್ಟೆಂಬರ್ 9ರಂದು ವಿಶ್ವದಾದ್ಯಂತ ತೆರೆಕಂಡಿದೆ. ಬಾಲಿವುಡ್ ರಂಗವನ್ನು ಬೆಚ್ಚಿ ಬೀಳಿಸಿರುವ ಬಾಯ್ಕಾಟ್ ಟ್ರೆಂಡ್ ನ ಬಿಸಿ ಈ ಚಿತ್ರಕ್ಕೂ ತಾಗಿತ್ತು.
'ಬ್ರಹ್ಮಾಸ್ತ್ರ' ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗ ಶಿವ ದಲ್ಲಿ ರಣಬೀರ್, ಆಲಿಯಾ ಭಟ್ ಜೊತೆಗೆ ಅಮಿತಾಭ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್, ಸೌರವ್ ಗುರ್ಜಾರ್ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಹಲವರು ಚಿತ್ರದ ಅತಿಯಾದ ವಿಎಫ್ ಎಕ್ಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಎಲ್ಲಾ ಅಸ್ತ್ರಗಳಿವೆ, ಆದರೆ ಸ್ಟೋರಿಯಾಸ್ತ್ರವೇ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ. ಇಷ್ಟೆಲ್ಲಾ ನೆಗೆಟಿವ್ ಕಮೆಂಟ್ ಗಳ ನಡುವೆಯೂ ರಣಬೀರ್ ಕಪೂರ್ ಚಿತ್ರ ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ. ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಪ್ರಕಾರ, ಬ್ರಹ್ಮಾಸ್ತ್ರ ಚಿತ್ರವು ಮೊದಲ ದಿನ ಸುಮಾರು 36 ಕೋಟಿ ರೂ ಗಳಿಸಿದೆ. ಯುಎಸ್ ಎ ಬಾಕ್ಸಾಫೀಸ್ ನಲ್ಲಿ ಚಿತ್ರವು ಮೊದಲ ದಿನ ಸುಮಾರು ಒಂದು ಮಿಲಿಯನ್ ಗೂ ಹೆಚ್ಚಿನ ಗಳಿಕೆ ಸಂಪಾದಿಸಿದೆ ಎಂದು ರಮೇಶ್ ಬಾಲ ಹೇಳಿದ್ದಾರೆ.
#Brahmastra Day 1 Early Estimates for All-India Nett for all languages 36 Crs..
— Ramesh Bala (@rameshlaus) September 10, 2022
A new record for non-holoday for an Original Hindi film..
ಸೂಪರ್ ಹೀರೋ ಡ್ರಾಮಾ ಮಾದರಿಯ ಚಿತ್ರವಾದ ಬ್ರಹ್ಮಾಸ್ತ್ರದಲ್ಲಿ ಆಲಿಯಾ ಭಟ್ ಇದೇ ಮೊದಲ ಬಾರಿಗೆ ರಣಬೀರ್ ಕಪೂರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.