2022ರ ವೇಳಗೆ ವ್ಯಾಕ್ಸಿನ್ ಗಳನ್ನು ರಫ್ತು ಮಾಡುವ ಸಾಧ್ಯತೆ : ಎನ್.ಕೆ. ಅರೋರ
ದೆಹಲಿ : ಭಾರತದಲ್ಲಿನ ಜನರಿಗೆ ಕೊರೋನಾ ಲಸಿಕೆ ಪೂರೈಸಿದ ಬಳಿಕ 2022ರ ವೇಳಗೆ ವ್ಯಾಕ್ಸಿನ್ ಗಳನ್ನು ರಫ್ತು ಮಾಡುವ ಸಾಧ್ಯತೆ ಇದೆ ಎಂದು ತಜ್ಞರ ಸಮಿತಿಯ ಮುಖ್ಯಸ್ಥ ಎನ್.ಕೆ. ಅರೋರ ತಿಳಿಸಿದ್ದಾರೆ. ವಿಶ್ವದ 60 ರಾಷ್ಟ್ರಗಳಿಗೆ ಲಸಿಕೆ ಲಭ್ಯವಿಲ್ಲದ ಕಾರಣ ಭಾರತ 2022ರಲ್ಲಿ ಲಸಿಕೆ ಒದಗಿಸುವಂತಾಗಬೇಕು. ನಮ್ಮ ದೇಶದಲ್ಲಿನ ವಯಸ್ಕರಿಗೆ ಲಸಿಕೆ ನೀಡಿದ ಬಳಿಕ ಹೊರ ದೇಶಗಳಿಗೂ ಲಸಿಕೆ ನೀಡುವಷ್ಟು ವ್ಯಾಕ್ಸಿನ್ ನಮ್ಮಲ್ಲಿ ಲಭ್ಯವಿರಬೇಕು ಎಂದರು.
ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಉದ್ಯಮಕ್ಕೆ ನೆಲೆಯಾಗಿರುವ ಭಾರತ, ಈ ವರ್ಷ ಪ್ರಧಾನಿ ಮೋದಿಯವರು ಬಡ ರಾಷ್ಟ್ರಗಳಿಗೆ ಲಸಿಕೆಯನ್ನು ರವಾನಿಸಿರುವುದು ಶ್ಲಾಘನೀಯ ವಿಷಯ ಎಂದಿದ್ದಾರೆ. ಭಾರತವು ತನ್ನ ಲಸಿಕಾ ಉತ್ಪಾದನಾ ಸಾಮರ್ಥ್ಯವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಿದೆ.
2021ರ ಕೊನೆಯಲ್ಲಿ 920 ಮಿಲಿಯನ್ ವಯಸ್ಕರಿಗೆ ಸಂಪೂರ್ಣವಾಗಿ ಲಸಿಕೆ ನೀಡಬೇಕು. ಅಂದರೆ ಸುಮಾರು 1.8 ಮಿಲಿಯನ್ ಡೋಸ್ ಆಗಿರುತ್ತದೆ. ಪೈಪ್‌ಲೈನ್ ಇರುವ ರೀತಿಯಲ್ಲಿ ಕೆಲಸ ನಡೆದರೆ ನಮ್ಮ ಗುರಿಯನ್ನು ತಲುಪಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ದೇಶದ ಅತಿದೊಡ್ಡ ಲಸಿಕೆ ಪೂರೈಕೆದಾರ ಸೀರಮ್ ಸಂಸ್ಥೆ ಸುಮಾರು 120 ಮಿಲಿಯನ್ ಡೋಸ್ ಗಳ ಮಾಸಿಕ ಕೊಡುಗೆಯನ್ನು 150 ಮಿಲಿಯನ್ ಡೋಸ್ ಗೆ ಹೆಚ್ಚಿಸಬೇಕು. ಭಾರತ್ ಬಯೋಟೆಕ್ ಕೂಡ 120 ಮಿಲಿಯನ್ ಡೋಸ್ ಗಳನ್ನು ಒದಗಿಸಬೇಕು ಎಂದರು.