ತಾಂತ್ರಿಕ ದೋಷ ಹಿನ್ನೆಲೆ : ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ನವದೆಹಲಿ : ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿ-ದುಬೈ ಸ್ಪೈಸ್ ಜೆಟ್ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಸ್ಪೈಸ್ ಜೆಟ್ ದೆಹಲಿ-ದುಬೈ ವಿಮಾನ ತಾಂತ್ರಿಕ ದೋಷದ ನಂತರ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು,ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತಂತೆ ಸುದ್ದಿ ಸಂಸ್ಥೆ ಎಎನ್ಐ ವರದಿ ನೀಡಿದೆ.
SpiceJet SG-11 flight from Delhi to Dubai makes an emergency landing in Karachi (Pakistan) after developing a technical fault. All passengers on board are safe. More details awaited. pic.twitter.com/E2VlfQOgdW
— ANI (@ANI) July 5, 2022