ನಾನು ಬೇರೆ ಸಭೆಗೆ ಹೋಗಿದ್ದರಿಂದ ನಿನ್ನೆ ಸಭೆಗೆ ಹೋಗಿಲ್ಲ: ಬಿಜೆಪಿ ನಾಯಕರಿಗೆ ಋಣಿಯಾಗಿದ್ದೇನೆ: ಬಿಎಸ್‌ ವೈ

ನಾನು ಬೇರೆ ಸಭೆಗೆ ಹೋಗಿದ್ದರಿಂದ ನಿನ್ನೆ ಸಭೆಗೆ ಹೋಗಿಲ್ಲ: ಬಿಜೆಪಿ ನಾಯಕರಿಗೆ ಋಣಿಯಾಗಿದ್ದೇನೆ: ಬಿಎಸ್‌ ವೈ

ಲಬುರಗಿ: ಬಿಜೆಪಿಯಲ್ಲಿ ಮಾಜಿ ಸಿಎಂ ಬಿ. ಎಸ್‌ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದಕ್ಕೆ ನಿನ್ನೆ ನಡೆದ ರಾಜ್ಯ ಬಿಜೆಪಿ ನಾಯಕರ ಸಭೆಗೆ ಆಹ್ವಾನ ನೀಡದಿರುವುದು ಮತ್ತುಷ್ಟು ಅನುಮಾನಕ್ಕೆ ಕಾರಣವಾಗಿದೆ.

ಆದರೆ ಇದೀಗ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಆರೋಪವನ್ನು ತಳ್ಳಿ ಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾನು ನಿನ್ನೆ ಬೇರೆ ಸಭೆಗೆ ಹೋಗಿದ್ದರಿಂದ ಈ ಸಭೆಗೆ ಹೋಗಿಲ್ಲ. ನಿನ್ನೆ ಬಿಜೆಪಿ ಸಭೆಗೆ ಹೋಗದಿದ್ದಕ್ಕೆ ವಿಶೇಷ ಕಾರಣವೇನು ಇಲ್ಲ. ಬಿಜೆಪಿ ನನಗೆ ಎಲ್ಲ ಸ್ಥಾನಮಾನಗಳನ್ನು ನೀಡಿದೆ ಎಂದರು ಕೇಂದ್ರ ಮತ್ತು ರಾಜ್ಯದಲ್ಲಿ ನನ್ನನ್ನು ಗೌರವಯುತವಾಗಿ ಕಾಣುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಋಣಿಯಾಗಿದ್ದೇನೆ ಎಂದರು.