'ಓಂ' ಎಂದು ಬರೆದ ಸಚಿವ ಸುನೀಲ್ ಕುಮಾರ್; ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ಹೀಗಿತ್ತು

'ಓಂ' ಎಂದು ಬರೆದ ಸಚಿವ ಸುನೀಲ್ ಕುಮಾರ್; ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ಹೀಗಿತ್ತು

ಮೈಸೂರು: ಇಲ್ಲಿ ಕಾವಾ ಮೇಳದಲ್ಲಿ ಸಚಿವ ಸುನೀಲ್ ಕುಮಾರ್ ಅವರು ಫಲಕದಲ್ಲಿ ಬರೆದ 'ಓಂ' ಕಂಡು ಶಾಸಕ ತನ್ವೀರ್ ಸೇಠ್ ಅಂಜಿದ ಪ್ರಸಂಗ ನಡೆಯಿತು.

ಮೈಸೂರು ಸಿದ್ಧಾರ್ಥ ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿ ನಡೆದ ‘ಕಾವಾ ಮೇಳ 2023’ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆಯಿತು.ಕಾರ್ಯಕ್ರಮ ಉದ್ಘಾಟನೆಯ ವೇಳೆ ಫಲಕದಲ್ಲಿ ಬರೆದು ಶುಭ ಹಾರೈಸುವ ಸಂದರ್ಭದಲ್ಲಿ ಸಚಿವ ಸುನೀಲ್ ಕುಮಾರ್ ಅವರು 'ಓಂ' ಎಂದು ದೊಡ್ಡದಾಗಿ ಬರೆದು ಕೆಳಗೆ ಸಹಿ ಹಾಕಿದರು.

ಆದರೆ ಸಚಿವರು ಬರೆದ 'ಓಂ' ಕಂಡ ಶಾಸಕ ತನ್ವೀರ್ ಸೇಠ್ ಕೆಳಗೆ ಏನನ್ನೂ ಬರೆಯದೆ ಬ್ರಷ್ ಇತರರಿಗೆ ಹಸ್ತಾಂತರಿಸಿದರು.