ಕೊರೊನಾಕ್ಕೆ ಉಚಿತ ಔಷಧಿ ವಿತರಣೆ | Chikkaballapur |

ಕೊರೊನಾ ವೈರಸ್ನಿಂದ ಸಂದಿಗ್ಧತೆಯಲ್ಲಿದ್ದವರಿಗೆ ಆಂದ್ರಪ್ರದೇಶದ ನಲ್ಲೂರು ಆನಂದಯ್ಯ ಆಯುರ್ವೇದ ಔಷಧಿ ಕೊರೊನಾಗೆ ರಾಮಬಾಣ ಎಂದು ಸುದ್ದಿ ಮಾಡಿತ್ತು. ಆ ಔಷದಿ ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ. ಆರ್ಯವೈಶ್ಯ ಫೌಂಡೇಶನ್ ಮತ್ತು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಯುಕ್ತಾಶ್ರದಲ್ಲಿ ಉಚಿತ ಔಷಧಿ ವಿತರಿಸಲಾಯಿತು. ಈ ಔಷದ ಪಡೆಯಲು ಜನ ಸಾಲುಗಟ್ಟಿ ನಿಲ್ಲುತಿದ್ದಾರೆ. ಕಾರ್ಯಕ್ರಮಕ್ಕೆ ನಗರಸಭಾ ಅಧ್ಯಕ್ಷ ಅನಂದಬಾಬುರೆಡ್ಡಿ ಚಾಲನೆ ನೀಡಿದರು. ಆರ್ಯವೈಶ್ಯ ಫೌಂಡೇಶನ್ ರಾಷ್ಟç ಖಜಾಂಜಿ ಪಿ.ಡಿ. ಗುರುಮೂರ್ತಿ ,ಜಿಲ್ಲಾಧ್ಯಕ್ಷ ವಿಕ್ರಂ,ಕಾರ್ಯದರ್ಶಿ ವಿಶ್ವನಾಥ್, ಬ್ರಹ್ಮಕುಮಾರಿ ಶಾಂತಕ್ಕ, ನಗರಸಭಾ ಸದಸ್ಯರಾದ ಗ್ಯಾಸ್ ನಾಗರಾಜ್,ಯತೀಶ್ ಉಪಸ್ಥಿತರಿದ್ದರು.