ಅಧಿಕಾರಿಗಳನ್ನು ನೋಡಿ ಸ್ಥಳದಿಂದ ಮದುವೆ ಗಂಡು ಓಟ !!!

ಕಡೂರು :ತಾಲ್ಲೂಕಿನ ಕರಿಕಲ್ಲಳ್ಳಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿಯಾಗಿ ನಡೆಯುತ್ತಿದ ಮದುವೆಗೆ ದಿಢೀರನೆ ಆಗಮಿಸಿದ ಅಧಿಕಾರಿಗಳನ್ನು ಕಂಡು ವರ ಸ್ಟೇಜ್ ನಲ್ಲೇ ವಧುವನ್ನು ಬಿಟ್ಟು ಓಡಿ ಹೋದ ಘಟನೆ ನಡೆದಿದೆ. ವರನ ಮನೆಯವರು ಹತ್ತು ಜನ ಮಾತ್ರ ಮದುವೆಗೆ ಸೇರುತ್ತಾರೆ ಎಂದು ಅನುಮತಿ ಪಡೆದು ಹಳ್ಳಿ ಭಾಗಕ್ಕೆ ಯಾವುದೇ ಅಧಿಕಾರಿಗಳು ಬರುವುದಿಲ್ಲ ಎಂದು ಬುದ್ಧಿವಂತಿಕೆಯಿಂದ ನೂರಾರು ಜನ ಮದುವೆ ಸೇರಿಸಿ ಮದುವೆ ಮಾಡುತ್ತಿದ್ದರು, ಆದರೆ ಜೋಡಿಹೋಚಿಹಳ್ಳಿ ಗ್ರಾ.ಪಂ ಅಧಿಕಾರಿಗಳಿಗೆ ಮದುವೆಗೆ ನೂರಾರು ಜನ ಸೇರಿದರೆ ಎಂಬ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದಾರೆ ಅಧಿಕಾರಿಗಳು ಬಂದಿದ್ದನು ನೋಡಿದ ಮದುವೆ ಗಂಡು ,ಹಾಗೂ ಮದುವೆಗೆ ಸೇರಿದಂತಹ ಜನ ಮದುವೆ ಹೆಣ್ಣು ಮತ್ತು ಭರ್ಜರಿ ಮಾಡಿಸಿದ ಭೋಜನವನ್ನೂ ಬಿಟ್ಟು ಸ್ಥಳದಿಂದ ಪರಾರಿ ಆಗಿದ್ದಾರೆ. ಈ ಸಂಬಂದ ಅಧಿಕಾರಿಗಳು ಕೊರೊನಾ ನಿಯಮ ಉಲ್ಲಂಘನೆ ಅಡಿಯಲ್ಲಿ ವರ ಹಾಗೂ ಕುಟುಂಬದ ಮೇಲೆ ಪ್ರಕರಣ ದಾಖಲಿಸಲಾಗಿದೆ.