ಕಲಾಂ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಗಿಟ್ಟಿಸಿದ ಚಿಣ್ಣರು

ಚಿಕ್ಕಬಳ್ಳಾಪುರ ನಗರದ ೭ನೇ ವಾರ್ಡ್ ನಿವಾಸಿ ಶಿಕ್ಷಕ ಅರುಣಕುಮಾರ ಹಾಗೂ ಸುನಿತಾ ದಂಪತಿಗಳ ಪುತ್ರಿಯರಾದ ಸ್ಮೃತಿ ಮತ್ತು ಸೃಷ್ಟಿ ಇವರನ್ನು ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳಿಗೆ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರೊ. ಕೋಡಿರಂಗಪ್ಪ ಹಾಗೂ ಕಸಾಪ, ಜನಪದ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಮಕ್ಕಳಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.