ನಾಗರಿಕ ಸ್ನೇಹಿ ಗ್ರಾಮ ಒನ್ ಉದ್ಘಾಟನೆ
ಬೀದರ ತಾಲೂಕಿನ ಮರಕಲ್ ಗ್ರಾಮದಲ್ಲಿ ನಾಗರಿಕ ಸ್ನೇಹಿ ಗ್ರಾಮ ಒನ್ ಎಂಬ ಜನಸೇವಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಶುಕ್ರವಾರ ಉದ್ಘಾಟಿಸಿದರು. ಗ್ರಾಮಮಟ್ಟದಲ್ಲೇ ಪ್ರತಿ ಪ್ರಜೆಗೂ ಸರ್ಕಾರದ ಸೇವೆ, ಬ್ಯಾಂಕಿಂಗ್ ಸೇವೆ, ಆರ್ಟಿಐ ಹಾಗೂ ಇತರ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಯೋಜನೆ ಇದಾಗಿದೆ. ೫,೦೦೦ಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದ ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರ ಪ್ರಾರಂಭಿಸಲಾಗುವುದು. ಈ ಕೇಂದ್ರಗಳಲ್ಲಿ ಸೇವಾ ಸಿಂಧು, ಸಕಾಲ, ಆರ್ಟಿಐ ಮತ್ತು ಮೈಕ್ರೋ ಬ್ಯಾಂಕಿಂಗ್ ಸೇವೆ ಲಭ್ಯವಿವೆ. ಕೇಂದ್ರವು ನಾಗರಿಕರು ಮತ್ತು ಸರ್ಕಾರದ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಶಾಸಕ, ರಹೀಮಖಾನ ಜಿಲ್ಲಾಧಿಕಾರಿ ರಾಮಚಂದ್ರನ ಆರ್. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಹಿರಾ ನಸಿಮ ಉಪಸ್ಥಿತರಿದ್ದರು.