ಕಾಂಗ್ರೆಸ್ನೊಳಗಿದೆ ನೇರ ಗುಂಪುಗಾರಿಕೆ ಕೆ.ಎಸ್ ಈಶ್ವರಪ್ಪ | Chikmagalur |
ಕಾಂಗ್ರೆಸ್ಸಿನಲ್ಲಿ ಒಬ್ಬರ ಕಂಡರೆ ಒಬ್ಬರಿಗೆ ಆಗಲ್ಲ, ಕಾಂಗ್ರೆಸ್ ಒಳಗೆ ನೇರ ಗುಂಪುಗಾರಿಕೆ ಇದೆ ಎಂದು ಕಾಂಗ್ರೆಸ್ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ಸಿಗರ ಫ್ಯೂಸ್ ಕಿತ್ತಿದ್ದೇನೆ ಎಂಬ ಎಚ್.ಡಿ.ಕೆ. ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿರೋದೇ ನಾಲ್ಕೈದು ಜನ ನಾಯಕರು ಕಾಂಗ್ರೆಸ್ಸಿಗರ ಫ್ಯೂಸ್ ಎಚ್.ಡಿ.ಕೆ. ಕಿತ್ತು ಹಾಕುವ ಅವಶ್ಯಕತೆ ಇಲ್ಲ. ಒಬ್ಬೊಬ್ಬರ ಫ್ಯೂಸನ್ನು ಒಬ್ಬೊಬ್ಬರೇ ಕಿತ್ತು ಹಾಕಿ ಕೊಳ್ತಿದ್ದಾರೆ ಎಂದರು. ಈ ಹಿಂದೆ ಹೊರ-ಒಳಗಿನ ಕಾಂಗ್ರೆಸ್ಸಿಗರು ಎಂದು ಬಹಿರಂಗವಾಗಿತ್ತು. ಸದ್ಯಕ್ಕೆ ತಲೆ ಮೇಲೆ ತಟ್ಟಿ ನಿಲ್ಲಿಸಿದ್ದಾರೆ ಅದು ಯಾವಾಗ ಪ್ರಜ್ವಲಿಸಿ ಸ್ಫೋಟ ಆಗುತ್ತೋ ಕಾಂಗ್ರೆಸ್ಸಿಗೆ ಗೊತ್ತಿಲ್ಲ ಎಂದು ಹೇಳಿದರು.