ರಸ್ತೆ ನಿರ್ಮಾಣ ಮಾಡದೇ ಗುತ್ತಿಗೆದಾರ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ
ಕೋಲಾರ : ಹಣ ಬಿಡುಗಡೆಯಾಗಿದ್ರು ರಸ್ತೆ ನಿರ್ಮಾಣ ಮಾಡದೇ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋಲಾರ ತಾಲೂಕಿನ ಹೊಗರಿ ಗ್ರಾಮದ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಯೋಜನೆಯಡಿಯಲ್ಲಿ ಹೊಗರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ 8 ಲಕ್ಷ ಹಣ ಬಿಡುಗಡೆಯಾಗಿದೆ. ಕಂಟ್ರಾಕ್ಟರ್ ನಂದೀಶ್ ಗೌಡ ಎಂಬುವರು ರಸ್ತೆ ಕಾಮಗಾರಿ ನಡೆಸಲು ಗುತ್ತಿಗೆ ಪಡೆದಿದ್ದಾರೆ, ಆದ್ರೆ ರಸ್ತೆ ಅಗೆದು ಜಲ್ಲಿ ಹಾಕಿ ಹೋಗಿರುವ ಕಂಟ್ರಾಕ್ಟರ್ 6 ತಿಂಗಳಾದ್ರು ಇತ್ತ ಕಡೆ ತಿರುಗಿ ನೋಡಿಲ್ಲ ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 6 ತಿಂಗಳಿಂದ ಗ್ರಾಮಸ್ಥರು ಜಲ್ಲಿ ರಸ್ತೆಯಲ್ಲಿ ಓಡಾಡಲು ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದಾರೆ, ಸಾಕಷ್ಟು ವಾಹನ ಸವಾರರು ಜಲ್ಲಿ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ದೊಡ್ಡ ವಾಹನಗಳು ಓಡಾಟ ನಡೆಸಿದ್ರೆ ರಸ್ತೆಯಲ್ಲಿನ ಧೂಳು ಇಡೀ ಗ್ರಾಮವನ್ನೇ ಅವರಿಸುತ್ತದೆ, ತುರ್ತು ಸಂಧರ್ಭದಲ್ಲಿ ಅಂಬುಲೆನ್ಸ್ ಕೊಡ ವೇಗವಾಗಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯ ರಮೇಶ್ ನೋವು ತೋಡಿಕೊಂಡ್ರು. ಮತ್ತೊಬ್ಬ ಗ್ರಾಮ ಪಂಚಾಯತಿ ಸದಸ್ಯ ಸುರೇಶ್ ಬಾಬು ಮಾತನಾಡಿ 6 ತಿಂಗಳಿಂದ ಕಂಟ್ರಾಕ್ಟರ್ ನಾಪತ್ತೆಯಾಗಿದ್ದಾನೆ, ಪೋನ್ ಮಾಡಿದ್ರು ತೆಗೆಯುತ್ತಿಲ್ಲ ಪಿಡಬ್ಲ್ಯಡಿ ಕಚೇರಿಯಲ್ಲಿ ವಿಚಾರಿಸಿದ್ರೆ ಹಣ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳು ಕೊಡಲೇ ಗುತ್ತಿಗೆದಾರನನ್ನು ಕರೆಯಿಸಿ ರಸ್ತೆ ನಿರ್ಮಾಣ ಮಾಡಿಕೊಡಬೇಕು ಇಲ್ಲದಿದ್ದರೆ ಕೋಲಾರ-ಚಿಕ್ಕಬಳ್ಳಾಪುರ ರಸ್ತೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.