24ನೇ ವಾರ್ಡನ್ನು ಅಭಿವೃದ್ಧಿ ಮಾಡುವುದೆ ನನ್ನ ಗುರಿ....ಮಯೂರ ಮೊರೆ.... | Dharwad |
ಮಹಾನಗರ ಪಾಲಿಕೆಯ ವಿಚಾರದಲ್ಲಿ ನವಲೂರ, ರಾಯಪೂರ ಸೇರಿ ಸುಮಾರು 20ರಿಂದ 30ಸಾವಿರ ಜನಸಂಖ್ಯೆ ಇದ್ದು, ಅದ್ರಂತೆ ಹು- ಧಾರವಾಡ ಸ್ಮಾಟ್೯ ಸಿಟಿಗೆ ಸೇರಿಕೊಂಡರು ಕೂಡ ಅದರ ತಕ್ಕಂತೆ ಯಾವುದೆ ಅಭಿವೃದ್ಧಿಗಳು ಆಗಿಲ್ಲ, ಅದ್ದರಿಂದ ಅಭಿವೃದ್ಧಿ ಮಾಡುವುದೆ ನನ್ನ ಗುರಿ ಎಂದು 24ನೇ ವಾರ್ಡಿನ ಕಾಂಗ್ರಸ್ ಅಭ್ಯರ್ಥಿ ಡಾ.ಮಯೂರ ಮೊರೆ ಹೇಳಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆ ನಾಮಪತ್ರವನ್ನು ಬೆಂಬಲಗರೊಂದಿಗೆ ಸಲ್ಲಿಕೆ ಮಾಡಿ ಮಾತನಾಡಿದ ಮೊರೆ ಅವರು. 24ನೇ ವಾರ್ಡಿ ನಲ್ಲಿ ಅಭಿವೃದ್ಧಿ ಕೆಲಸಗಳು ಕುಂಟಿತಗೊಂಡಿವೆ, ಪ್ರಮುಖವಾಗಿ ಹೆಚ್ಚು ಜನಸಂಖ್ಯೆ ಇರುವಂತ ಊರುಗಳಿವೆ. ಅದರಿಂದ ಇಲ್ಲಿರುವ ಸಮಸ್ಯೆಯನ್ನು ಬಗಿಹರಿಸಿ ಅಭಿವೃದ್ಧಿ ಮಾಡಸ್ತನಿ ಎಂದರು