ಸಿದ್ದು ಕ್ಷೇತ್ರ ಘೋಷಣೆ ಮಾಡ್ತಿದ್ದಂತೆ ಕೋಲಾರಕ್ಕೆ B.L ಸಂತೋಷ್ ಎಂಟ್ರಿ.. 'ಸಂಘಟನಾ ಚಕ್ರವ್ಯೂಹ' ರೆಡಿ

2023ರ ಚುನಾವಣಾ ಕಣ ಮತ್ತಷ್ಟು ರಂಗು ಪಡೆದುಕೊಂಡಿದೆ. ಅದರಲ್ಲೂ ಸಿದ್ದರಾಮಯ್ಯ ಕ್ಷೇತ್ರ ಘೋಷಿಸುತ್ತಿದ್ದಂತೆ, ಕೇಸರಿ ಪಡೆ ಕಣ್ಣು ಚಿನ್ನದ ನಾಡಿನತ್ತ ನೆಟ್ಟಿದೆ. ಸಿದ್ದು ಮಿಂಚಿನ ಓಟವನ್ನ ಕಟ್ಟಿ ಹಾಕಲು ರಾಷ್ಟ್ರ ರಾಜಧಾನಿಯಿಂದ ಸಂಘಟನಾ ಚತುರನ ರಂಗ ಪ್ರವೇಶವಾಗಿದೆ.
ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಕೋಟೆಯ ಮಹಾದಂಡ ನಾಯಕ. 2023ರ ಮತ ಯುದ್ಧದ ರಣಾಂಗಣದಲ್ಲಿ ಸಿದ್ದುರದ್ದು ಪ್ರಮುಖ ಪಾತ್ರ. ಆದರೆ ಇದೇ ಮಾಸ್ ಲೀಡರ್ಗೆ, ಕ್ಷೇತ್ರ ಆಯ್ಕೆ ಗೊಂದಲ ದೊಡ್ಡ ಮಟ್ಟಿಗೆ ಸವಾಲಾಗಿತ್ತು. ತಿಂಗಳಾನುಗಟ್ಟಲೇ ಕಬ್ಬಿಣದ ಕಲಡೆಯಂತಿದ್ದ, ಕ್ಷೇತ್ರ ಆಯ್ಕೆಯಲ್ಲಿ ಕೊನೆಗೂ ಸಿದ್ದು ನಿರ್ಧಾರ ತೆಗೆದುಕೊಂಡಿದ್ರು. ಚಿನ್ನದ ಭೂಮಿ ಕೋಲಾರದಿಂದಲೇ ಕಣಕ್ಕಿಳಿಯೋ ಬಗ್ಗೆ ವಿಪಕ್ಷ ನಾಯಕ ಘೋಷಿಸಿಯೇ ಬಿಟ್ಟಿದ್ರು.
ಹೇಳಿ ಕೇಳಿ ಕೋಲಾರ ದಲಿತ ಮತ್ತು ಅಲ್ಪ ಸಂಖ್ಯಾತರ ವೋಟ್ ಬ್ಯಾಂಕ್ ಇರೋ ಕ್ಷೇತ್ರ. ಹೀಗಾಗಿ ಅಳೆದು ತೂಗಿ ಸಿದ್ದರಾಮಯ್ಯ ಕೋಲಾರವನ್ನ ಆಯ್ಕೆ ಮಾಡಿಕೊಂಡಿದ್ರು. ಇದು ಕೇಸರಿ ರಣಕಲಿಗಳ ಕಣ್ಣಿಗೆ ಕುಕ್ಕಿದೆ. ಹೇಗಾದ್ರೂ ಮಾಡಿ ಸಿದ್ದರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ಕಮಲ ಪಡೆ ಒಳಗೊಳಗೆ ದೊಡ್ಡ ರಣತಂತ್ರ ಹೂಡಲು ಮುಂದಾಗಿತ್ತು. ಅದಕ್ಕಾಗಿಯೇ ರಾಷ್ಟ್ರ ರಾಜಧಾನಿಯಿಂದ ಸಂಘಟನಾ ತಂತ್ರಗಾರನ ಆಗಮನವಾಗಿದೆ.